alex Certify ಮದ್ಯ ನಿಷೇಧವಿರುವ ಬಿಹಾರದಲ್ಲಿ ಮದುವೆ ದಿನ ಕುಡುಕರ ಹಾವಳಿ; ಬರೋಬ್ಬರಿ 40 ಅತಿಥಿಗಳು ‌ʼಅರೆಸ್ಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ನಿಷೇಧವಿರುವ ಬಿಹಾರದಲ್ಲಿ ಮದುವೆ ದಿನ ಕುಡುಕರ ಹಾವಳಿ; ಬರೋಬ್ಬರಿ 40 ಅತಿಥಿಗಳು ‌ʼಅರೆಸ್ಟ್ʼ

ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದ್ದು, ಆದರೆ ಪದೇ ಪದೇ ಇದನ್ನು ಉಲ್ಲಂಘಿಸುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ ಮುಜಫರ್‌ಪುರದಲ್ಲಿ ಮದುವೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ 40 ಜನರನ್ನು ರಾಜ್ಯದ ನಿಷೇಧ ಕಾನೂನುಗಳನ್ನು ಉಲ್ಲಂಘಿಸಿ ಮದ್ಯ ಸೇವಿಸಿದ್ದಕ್ಕಾಗಿ ಭಾನುವಾರದಂದು ಬಂಧಿಸಲಾಗಿದೆ. 2016 ರಲ್ಲಿ ಮದ್ಯವನ್ನು ನಿಷೇಧಿಸಿದಾಗಿನಿಂದ ರಾಜ್ಯವು ಎದುರಿಸುತ್ತಿರುವ ಸವಾಲುಗಳನ್ನು ಇನ್ನೂ ಜಯಿಸಲು ಸಾಧ್ಯವಾಗಿಲ್ಲ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.

ಬಂಧಿತ ವ್ಯಕ್ತಿಗಳು, ವರನ ಕಡೆಯವರು ಎನ್ನಲಾಗಿದ್ದು, ಎಲ್ಲರೂ ಪಾನಮತ್ತರಾಗಿದ್ದರು ಜೊತೆಗೆ ಮದುವೆ ಮೆರವಣಿಗೆಯಲ್ಲಿ ‘ನಾಗಿನ್’ ನೃತ್ಯ ಮಾಡಲು ಮುಂದಾಗಿದ್ದರು ಎಂದು ವರದಿಯಾಗಿದೆ. ಅಲ್ಲದೇ ಮದುವೆಯಲ್ಲಿ ಇತರರಿಗೆ ಉಡುಗೊರೆಯಾಗಿ ನೀಡಲು ಉದ್ದೇಶಿಸಿ ಮದ್ಯದ ಬಾಟಲಿಗಳನ್ನು ತಂದಿದ್ದನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬಂಧಿತ 40 ಜನರ ಜೊತೆಗೆ, ಅಧಿಕಾರಿಗಳು ಏಳು ಮದ್ಯದ ವ್ಯಾಪಾರಿಗಳನ್ನು ಸಹ ಬಂಧಿಸಿದ್ದಾರೆ, ಅವರು ಮದ್ಯವನ್ನು ಸರಬರಾಜು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸರ ಕ್ರಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದರು. ಮದುವೆಗೆ ಬಂದವರು ಬಳಸುತ್ತಿದ್ದ ಎರಡು ವಾಹನಗಳನ್ನು ಜಫ್ತಿ ಮಾಡಲಾಗಿದ್ದು, ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ನಿಷೇಧದ ನಡುವೆಯೂ ರಾಜ್ಯದಲ್ಲಿ ಅನಿಯಂತ್ರಿತ ಮದ್ಯ ಮಾರಾಟ ಜೋರಾಗಿದೆ. ಕಳೆದ ತಿಂಗಳು, ಪಾಟ್ನಾ ಹೈಕೋರ್ಟ್ ರಾಜ್ಯದ ಅಧಿಕಾರಿಗಳು ಮದ್ಯದ ವ್ಯಾಪಾರದಲ್ಲಿ ಭಾಗಿಯಾಗಿದ್ದಾರೆ ಎಂದು ಟೀಕಿಸಿತ್ತು, ಅನೇಕ ಸರ್ಕಾರಿ ಅಧಿಕಾರಿಗಳು ಅಕ್ರಮ ಮದ್ಯದ ವ್ಯಾಪಾರದಿಂದ ಲಾಭ ಪಡೆಯುತ್ತಾರೆ, ಇದು ನಿಷೇಧದ ಉದ್ದೇಶವನ್ನು ಹಾಳುಮಾಡುತ್ತಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...