alex Certify ಮದ್ಯದ ಅಮಲಲ್ಲಿ ವಿಮಾನದಲ್ಲೇ ಬೆತ್ತಲಾಗಿ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಅಮಲಲ್ಲಿ ವಿಮಾನದಲ್ಲೇ ಬೆತ್ತಲಾಗಿ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ

ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಏಷ್ಯಾ ಇಂಡಿಯಾ ವಿಮಾನದಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಬೆತ್ತಲಾಗಿ ಸಿಬ್ಬಂದಿಯೊಂದಿಗೆ ಅಸಭ್ಯವರ್ತನೆ ತೋರಿದ ಘಟನೆ ಇತ್ತೀಚೆಗೆ ನಡೆದಿದೆ.

ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ವ್ಯಕ್ತಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ. ಏಪ್ರಿಲ್ 6 ರಂದು ಘಟನೆ ನಡೆದಿದೆ. ಅಂದು ಮುಂಜಾನೆ 12.46 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಏರ್ ಏಷ್ಯಾ ವಿಮಾನ ಬೆಳಿಗ್ಗೆ 3.21 ಕ್ಕೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಇಳಿದಿದೆ.

ಅಶಿಸ್ತಿನ ಪ್ರಯಾಣಿಕರೊಬ್ಬರು ವಿಮಾನದ ಸಿಬ್ಬಂದಿಯೊಂದಿಗೆ ಜಗಳವಾಡಿ ಕೆಟ್ಟದಾಗಿ ವರ್ತಿಸಿದರು. ಇದ್ದಕ್ಕಿದ್ದಂತೆ ತಮ್ಮ ಎಲ್ಲ ಬಟ್ಟೆಗಳನ್ನು ಕಿತ್ತೆಸೆದು, ಅಸಭ್ಯವಾಗಿ ವರ್ತಿಸಿದ್ದು, ಸಹಪ್ರಯಾಣಿಕರ ನೆರವಿನಿಂದ ಅವರನ್ನು ನಿಯಂತ್ರಿಸಲಾಗಿದೆ. ದೆಹಲಿಗೆ ತೆರಳಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಯಾಣಿಕನ ವಿರುದ್ಧ ದೆಹಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Pokud přidáte tuto složku – Proč se zamlžují okna v autě: příčiny Okroshka: дешевое лекарство со скорыми результатами в унитазной чашке Jak si umýt vlasy a vyléčit Jak efektivně odstranit skvrny z ubrusů: tipy pro Jarní superpotravina: recept