ಅಳುತ್ತಿದ್ದ 2 ವರ್ಷದ ಮಗನನ್ನು ಕುಡಿದ ಮತ್ತಿನಲ್ಲಿ ತಂದೆಯೇ ಹತ್ಯೆ ಮಾಡಿದ್ದು ಆತನನ್ನು ಬಂಧಿಸಿರೋ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ನವೆಂಬರ್ 7 ರ ಸೋಮವಾರ ರಾತ್ರಿ 9.30 ರ ಸುಮಾರಿಗೆ ಕುಡಿದು ಬಂದ ತಂದೆ ತನ್ನ 2 ವರ್ಷದ ಮಗನನ್ನು ಕೊಂದಿದ್ದಾನೆ. ಮಗುವಿನ ತಾಯಿ-ಆರೋಪಿಯ ಹೆಂಡತಿಯಾದ ದಿವ್ಯಾ ನೀಡಿದ ದೂರಿನ ಮೇರೆಗೆ ನೇರಡ್‌ಮೆಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ದಿವ್ಯಾ ಮತ್ತು ಸುಧಾಕರ್, ನೇರಡ್‌ಮೆಟ್‌ನ ಜೆಜೆ ನಗರದ ಎಸ್‌ಎಸ್‌ಬಿ ಅಪಾರ್ಟ್‌ಮೆಂಟ್‌ನಲ್ಲಿ ವಾಚ್‌ಮನ್‌ಗಳಾಗಿ ಕೆಲಸ ಮಾಡುತ್ತಿದ್ದರು. 2019 ರಲ್ಲಿ ಮದುವೆಯಾದ ಅವರಿಗೆ ಎರಡು ವರ್ಷದ ಮಗನಿದ್ದನು.
ಸೋಮವಾರ ರಾತ್ರಿ ಅಳುತ್ತಿದ್ದ ಬಾಲಕ ಜೀವನ್ ಮೇಲೆ ಕುಡಿದ ಮತ್ತಿನಲ್ಲಿದ್ದ ಸುಧಾಕರ್ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಗಾಯಗೊಂಡಿದ್ದ ಮಗು ಸಾವನ್ನಪ್ಪಿದೆ.
ತಾಯಿ ದಿವ್ಯಾ ಅವರ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ನೇರಡ್‌ಮೆಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.