ನವದೆಹಲಿ: ಮಾದಕ ವಸ್ತುಗಳ ನಿಗ್ರಹಕ್ಕೆ ಕೇಂದ್ರ ಸರ್ಕಾರ 1933 ಎಂಬ ಪ್ರತ್ಯೇಕ ಸಹಾಯವಾಣಿ ಆರಂಭಿಸಿದೆ. ದೇಶದ ಮೊದಲ ಡ್ರಗ್ಸ್ ಸಹಾಯವಾಣಿ 1933 ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಉದ್ಘಾಟಿಸಲಿದ್ದಾರೆ.
ಮಾದಕ ವಸ್ತುಗಳಿಗೆ ಸಂಬಂಧಿಸಿದ ದೂರು, ಮಾಹಿತಿಯನ್ನು ಸಹಾಯವಾಣಿಗೆ ಹಂಚಿಕೊಳ್ಳಬಹುದಾಗಿದೆ. ದಿನದ 24 ಗಂಟೆಯೂ ಸಹಾಯವಾಣಿ ಕಾರ್ಯ ನಿರ್ವಹಿಸಲಿದ್ದು, ಯಾವುದೇ ವ್ಯಕ್ತಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ದೂರು, ಸಲಹೆ, ಮಾಹಿತಿ ಹಂಚಿಕೊಳ್ಳಬಹುದಾಗಿದೆ. ಕರೆ ಮಾಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು.
1933 ಸಹಾಯವಾಣಿ ಜೊತೆಗೆ info.ncbmans@gov.in ಇ-ಮೇಲ್, ncbmans.gov.in ವೆಬ್ಸೈಟ್ ಗಳನ್ನು ಸಚಿವರು ಉದ್ಘಾಟನೆ ಮಾಡಲಿದ್ದಾರೆ.