
ನಿಷೇಧಿತ ಕೆಮ್ಮಿನ ಔಷಧಿ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಕೊಡೇನ್ ಯುಕ್ತ ಕೆಮ್ಮಿನ ಔಷಧಿಯನ್ನು ಬೈಕ್ ನಲ್ಲಿ ಸಾಗಿಸುತ್ತಿದ್ದ ವೇಳೆ ಶಿಲ್ ದೈಗರ್ ಪ್ರದೇಶದ ಸಿಬ್ಲಿನಗರದಲ್ಲಿ ಬೈಕ್ ತಪಾಸಣೆ ನಡೆಸಿದಾಗ 53,550 ರೂ ಮೌಲ್ಯದ ನಿಷೇಧಿತ ಔಷಧ ಪತ್ತೆಯಾಗಿದೆ. ಎರಡು ಬಾಕ್ಸ್ ಗಳಲ್ಲಿ 238 ನಿಷೇಧಿತ ಕೊಡೇನ್ ಯುಕ್ತ ಕೆಮ್ಮಿನ ಔಷಧಗಳನ್ನು ಜಪ್ತಿಮಾಡಲಾಗಿದೆ. 22 ವರ್ಷದ ಬೈಕ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 1,800 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.