ಬೆಂಗಳೂರಿನ ಉತ್ತರ ವಿಭಾಗದಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದು, ಡ್ರಗ್ ಪೆಡ್ಲರ್ ಗಳ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಕೊಲೆಗೆ ಯತ್ನಿಸಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಮಾಹಿತಿದಾರನ ಕೊಲೆಗೆ ಯತ್ನಿಸಿದ್ದಾರೆ. ಡ್ರಗ್ ಮಾರಾಟದ ಬಗ್ಗೆ ಪೊಲೀಸರಿಗೆ ವ್ಯಕ್ತಿ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಆತನ ಕೊಲೆಗೆ ಯತ್ನಿಸಲಾಗಿದೆ.
ಮಾಹಿತಿದಾರನ ಖಚಿತ ಮಾಹಿತಿ ಆಧರಿಸಿ ಪೊಲೀಸರ ತಂಡ ದಾಳಿ ನಡೆಸಿತ್ತು. ರಾಜಗೋಪಾಲನಗರ ಠಾಣೆ ಪೋಲೀಸರು ದಾಳಿ ನಡೆಸಿ ಡ್ರಗ್ ಜಪ್ತಿ ಮಾಡಿ ಅಯೂಬ್ ಮತ್ತು ರೋಷನ್ ಅವರನ್ನು ಬಂಧಿಸಿದ್ದರು. ಜಾಮೀನು ಪಡೆದು ಹೊರಬಂದಿದ್ದ ಅಯೂಬ್ ಮತ್ತು ರೋಷನ್ ಪೊಲೀಸರಿಗೆ ಮಾಹಿತಿ ನೀಡಿದ್ದ ವ್ಯಕ್ತಿಗಾಗಿ ಹುಡುಕಾಡಿದ್ದರು.
ಮಾಹಿತಿದಾರ ಆರೋಪಿಗಳಿಂದ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾನೆ. ಲಾಂಗ್ ಹಿಡಿದು ಕೊಲೆ ಮಾಡಲು ಬಂದಿದ್ದಾಗ ವ್ಯಕ್ತಿ ಪರಾರಿಯಾಗಿದ್ದಾನೆ. ಆಯೂಬ್ ಮತ್ತು ರೋಷನ್ ಅವರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಜೀವ ಕಳೆದುಕೊಳ್ಳುವ ಭಯದಲ್ಲಿ ಮಾಹಿತಿದಾರ ಇದ್ದು, ಡ್ರಗ್ ಪೆಡ್ಲರ್ ಗಳ ಬಗ್ಗೆ ಮಾಹಿತಿ ನೀಡಿದ್ದ ವ್ಯಕ್ತಿಗೆ ಖಾಕಿ ರಕ್ಷಣೆ ನೀಡಿಲ್ಲವೆಂಬ ಆರೋಪ ಕೇಳಿ ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.