ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್ ಕೊಳಗೇರಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಾದಕ ವ್ಯಸನಿಯಾಗಿದ್ದ ಯುವಕನೊಬ್ಬ ಅಮಲಿನಲ್ಲಿ ತನ್ನ ತಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ದೀಪಾವಳಿ ಹಿಂದಿನ ದಿನ ರಾತ್ರಿ ಘಟನೆ ನಡೆದಿದೆ. ಮಾದಕ ವಸ್ತು, ಮದ್ಯ ಸೇವಿಸಿ ಮನೆಗೆ ಬಂದ ಯುವಕ, ತಾಯಿ ಕುತ್ತಿಗೆ ಬಳಿ ಚಾಕು ಹಿಡಿದು ಬೆದರಿಸಿದ್ದಲ್ಲದೇ, ಲೈಂಗಿಕಕ್ರಿಯೆಗೆ ಸಹಕರಿಸುವಂತೆ ಬಲವಂತ ಮಾಡಿದ್ದಾನೆ. ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಕತ್ತು ಸೀಳುವುದಾಗಿ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. ಮಹಿಳೆ ತಿಲಾ ಮೋರ್ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.