
ವನ್ಯಜೀವಿ ಛಾಯಾಗ್ರಾಹಕನ ಕೆಲಸವು ತುಂಬಾ ಮನಮೋಹಕವಾಗಿ ಕಾಣಿಸಬಹುದು, ಆದರೆ ಅದರಷ್ಟು ಕ್ಲಿಷ್ಟಕರವಾದದ್ದು ಮತ್ತೊಂದಿಲ್ಲ. ಛಾಯಾಗ್ರಾಹಕರು ಹೊಸಹೊಸ ವಿಡಿಯೋ ಮಾಡಲು ಪ್ರಾಣಿ, ಪಕ್ಷಿ ಅಥವಾ ಸರೀಸೃಪಗಳ ಪರಿಪೂರ್ಣ ಶಾಟ್ ಅನ್ನು ಸೆರೆಹಿಡಿಯಲು ಕಾಡುಗಳು ಮತ್ತು ಜವುಗು ಪ್ರದೇಶಗಳಲ್ಲಿ ಗಂಟೆಗಳ ಕಾಲ ಕಳೆಯುತ್ತಾರೆ.
ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಛಾಯಾಗ್ರಾಹಕನ ಸ್ಥಿತಿಯನ್ನು ವಿವರಿಸುತ್ತದೆ. ಡ್ರೋನ್ ಮೂಲಕ ವಿಡಿಯೋ ಸೆರೆಹಿಡಿಯಲು ಪ್ರಯತ್ನಿಸಿದಾಗ ಮುಂದೇನಾಯಿತು ಎನ್ನುವ ಕುತೂಹಲದ ವಿಡಿಯೋ ವೈರಲ್ ಆಗಿದೆ.
ಟ್ವಿಟರ್‌ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಡ್ರೋನ್ ನೀರಿನ ಮೇಲೆ ಹಾರಾಡುವುದನ್ನು ನೋಡಬಹುದು. ಕೆಲವೊಂದು ದೃಶ್ಯಗಳನ್ನು ಸೆರೆ ಹಿಡಿಯಲು ಡ್ರೋನ್ ಅನ್ನು ಛಾಯಾಗ್ರಾಹಕ ಇಲ್ಲಿ ಹಾರಿಸುತ್ತಿದ್ದ. ಆದರೆ ಕೊನೆಗೆ ಆದದ್ದೇ ಬೇರೆ.
ಇದು ಅಲ್ಲಿ ಈಜಾಡುತ್ತಿದ್ದ ಮೊಸಳೆಗೆ ಸಿಟ್ಟು ತರಿಸಿರಬೇಕು. ಅದರ ಶಬ್ದದಿಂದ ಕಿರಿಕಿರಿಯಾದ ಮೊಸಳೆಯು ತನ್ನ ತಲೆಯನ್ನು ನೀರಿನಿಂದ ಹೊರಗೆ ಹಾಕಿ ಡ್ರೋನ್ ಅನ್ನು ನುಂಗಿದೆ! ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋಗೆ ಥರಹೇವಾರಿ ಕಮೆಂಟ್ಗಳು ಬರುತ್ತಿವೆ.
https://twitter.com/Assadbinthalib/status/1605214883527528448?ref_src=twsrc%5Etfw%7Ctwcamp%5Etweetembed%7Ctwterm%5E1605214883527528448%7Ctwgr%5Ed24f71fe37f32b270b2236f5619ba0c9a3838128%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdrone-tries-to-capture-footage-of-alligator-in-water-viral-video-has-an-unexpected-ending-2311840-2022-12-21