ನವರಾತ್ರಿ ಪ್ರಾರಂಭವಾಗಿ ಕೊನೆ ಹಂತತಲುಪಿದೆ. ದೇಶದಾದ್ಯಂತ ಜನರಲ್ಲಿ ಹಬ್ಬದ ಸಂತೋಷವು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದ ಎರಡು ವರ್ಷಗಳು ಹಬ್ಬದ ಆಚರಣೆ ಅಪೂರ್ಣವಾಗಿತ್ತು. ಈ ಬಾರಿ ಹಳೇ ಬಾಕಿ ಚುಕ್ತಾ ಮಾಡುವಂತೆ ಜನ ಸಂಭ್ರಮದಲ್ಲಿದ್ದಾರೆ.
ಮುಂಬೈ ಲೋಕಲ್ ರೈಲಿನೊಳಗೆ ಗಾರ್ಬಾ ಮಾಡುವುದರಿಂದ ಹಿಡಿದು ಬೆಂಗಳೂರು ವಿಮಾನ ನಿಲ್ದಾಣದವರೆಗೆ ಎಲ್ಲೆಲ್ಲೂ ಗರ್ಬಾ ನೃತ್ಯ ಗಮನ ಸೆಳೆಯುತ್ತಿದೆ. ಇದೀಗ ವಡೋದರಾದ ಮೈದಾನದಲ್ಲಿ ಭಕ್ತರು ನೃತ್ಯ ಮಾಡುತ್ತಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ.
ವಿಡಿಯೋವನ್ನು ಡ್ರೋನ್ನಿಂದ ತೆಗೆಯಲಾಗಿದೆ. ಇದು ಬೃಹತ್ ಮೈದಾನದ ವಿಹಂಗಮ ನೋಟವನ್ನು ತೋರಿಸುತ್ತದೆ, ಅಲ್ಲಿ ಜನರು ಗಾರ್ಬಾ ಮಾಡುವುದನ್ನು ಕಾಣಬಹುದು. ಪ್ರಕಾಶಮಾನವಾಗಿ ಬೆಳಗಿದ ಕ್ಲಿಪ್ ನಿಜವಾಗಿಯೂ ಅಚ್ಚರಿ ಮೂಡಿಸುತ್ತದೆ.
ಪೋಸ್ಟ್ ಆದ ವಿಡಿಯೊ ಕೆಲವೇ ಹೊತ್ತಿನಲ್ಲಿ 47 ಸಾವಿರ ವೀಕ್ಷಣೆಗಳನ್ನು ಮತ್ತು ಸಾವಿರಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಕ್ಲಿಪ್ ಅನೇಕರನ್ನು ಮಂತ್ರಮುಗ್ಧರನ್ನಾಗಿಸಿದೆ. ಚಿಕ್ಕ ವಿಡಿಯೊದಲ್ಲಿ ನವರಾತ್ರಿಯ ನಿಜವಾದ ಚೈತನ್ಯವು ಹೇಗೆ ಗೋಚರಿಸುತ್ತದೆ ಎಂಬುದರ ಕುರಿತು ಜನರು ಅಭಿಪ್ರಾಯ ನೀಡಿದ್ದಾರೆ.
https://twitter.com/ImSP_India/status/1576025100830531584?ref_src=twsrc%5Etfw%7Ctwcamp%5Etweetembed%7Ctwterm%5E1576025100830531584%7Ctwgr%5E43db023b08437f6b351fadea513bb75536b33dc7%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdrone-shot-of-hundreds-of-people-doing-garba-in-gujarat-s-vadodara-will-amaze-you-viral-video-2007128-2022-10-01