ಬಿಗ್ ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಶೃಂಗೇರಿ ಹೊರಕ್ಕೆ ಬಂದಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಟಾಸ್ಕ್ ನಲ್ಲಿ ಇಬ್ಬರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಹರಿದಾಡುತ್ತಿದೆ.
ಬಿಗ್ ಬಾಸ್ ಸದ್ಯ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ ಟಾಸ್ಕ್ ನೀಡುತ್ತಿದೆ. ಟಾಸ್ಕ್ ವೇಳೆ ಪ್ರತಾಪ್ ಹಾಗೂ ಸಂಗೀತಾ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ವಾಹಿನಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಹುಲಿ ಉಗುರು ಧರಿಸಿದ ಆರೋಪದ ಮೇರೆಗೆ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದರು. ಈ ಬಳಿಕ ಬಿಗ್ ಬಾಸ್ ಹಲವು ವಿವಾದ, ಕಾಂಟ್ರವರ್ಸಿಗಳಿಗೆ ಸಾಕ್ಷಿಯಾಗಿತ್ತು. ಜಾತಿ ನಿಂದನೆ ಆರೋಪದಡಿ ಸ್ಪರ್ಧಿ ತನಿಷಾ ವಿರುದ್ಧ ಕೂಡ ಕೇಸ್ ದಾಖಲಿಸಲಾಗಿತ್ತು.