
ಹೊರಜಗತ್ತಿನೊಂದಿಗೆ ಸೀಮಿತ ಸಂಪರ್ಕ ಹೊಂದಿರುವ ಪ್ರದೇಶಗಳಿಗೆ ಅಂಚೆ ಪ್ಯಾಕೇಜ್‌ಗಳ ಡೆಲಿವರಿ ಮಾಡಲು ಡ್ರೋನ್‌ಗಳನ್ನು ಬಳಸಬೇಕೆಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಜೀವ ತುಂಬಲು ಮುಂದಾಗಿದ್ದಾರೆ ಗರುಡಾ ಏರೋಸ್ಪೇಸ್‌ನ ಸಿಇಓ ಹಾಗೂ ಸಂಸ್ಥಾಪಕ ಅಗ್ನೀಶ್ವರ್ ಜಯಪ್ರಕಾಶ್.
ಭಾರತದಲ್ಲಿ ಸದ್ಯದ ಮಟ್ಟಿಗೆ ಡ್ರೋನ್ ಕ್ಷೇತ್ರವು, ಹತ್ತು ವರ್ಷಗಳ ಹಿಂದೆ ಇ-ಕಾಮರ್ಸ್, ಇ-ಲರ್ನಿಂಗ್‌ಗಳಿದ್ದ ಸಮನಾಂತರದ ಮಟ್ಟದಲ್ಲಿದೆ ಎನ್ನುವ ಅಗ್ನೀಶ್ವರ್, ಫುಡ್ ಡೆಲಿವರಿಯಂಥ ಬೈಕ್ ಆಧರಿತ ಸೇವಾದಾರರೊಂದಿಗೆ ಪೋಸ್ಟಲ್ ಪ್ಯಾಕೇಜ್ ಡೆಲಿವರಿಯನ್ನು ಹೋಲಿಸುತ್ತಾರೆ.
ಹುಟ್ಟುಹಬ್ಬದ ನಂತರ ರಿಲ್ಯಾಕ್ಸ್ ಮೂಡ್ ನಲ್ಲಿ ಡ್ರೀಮ್ ಗರ್ಲ್ ಹೇಮಾಮಾಲಿನಿ….!
ಅಂಚೆ ಪ್ಯಾಕೇಜ್‌ಗಳ ಡ್ರೋನ್ ಡೆಲಿವರಿಗೆ ತಗುಲುವ ವೆಚ್ಚದ ಕುರಿತು ಮಾತನಾಡಿದ ಅಗ್ನೀಶ್ವರ್, “10 ಕಿಮೀ ವ್ಯಾಪ್ತಿಯಲ್ಲಿ ಮಾಡಲಾಗುವ ಡೆಲಿವರಿಯೊಂದಕ್ಕೆ 80 ರೂ.ಗಳೆಂದು ಅಂದಾಜು ಮಾಡಬಹುದು. ಆದರೆ, ಬೇಡಿಕೆ ಹೆಚ್ಚುತ್ತಾ ಸೇವೆಗಳ ಲಭ್ಯತೆ ಇನ್ನಷ್ಟು ಹೆಚ್ಚಾದಂತೆ, ಈ ವೆಚ್ಚವನ್ನು 40 ರೂ.ಗೆ ಇಳಿಸಬಹುದು. ಡೆಲಿವರಿ ವೆಚ್ಚಗಳದ್ದು ಒಂದು ಕಥೆಯಾದರೆ ನಮಗೆ ಅಗತ್ಯವಾದ ಡ್ರೋನ್‌ಗಳನ್ನು ಮಾರ್ಪಾಡು ಮಾಡುವುದು ಡ್ರೋನ್ ಉತ್ಪಾದಕರ ಮುಂದೆ ಇರಬಹುದಾದ ಮತ್ತೊಂದು ಸವಾಲು,” ಎಂದಿದ್ದಾರೆ.
ಡಿಸೆಂಬರ್ 2021ರ ವೇಳೆ 1000 ಡ್ರೋನ್‌ಗಳ ಸಂಗ್ರಹ ಹೊಂದುವ ಗುರಿ ಇಟ್ಟುಕೊಂಡಿರುವ ಗರುಡಾ ಏರೋಸ್ಪೇಸ್ ಸ್ಟಾರ್ಟ್ಅಪ್, 2022ರ ವೇಳೆಗೆ ಡ್ರೋನ್ ಕ್ಷೇತ್ರದಲ್ಲಿ $1 ಶತಕೋಟಿ ಮೀರಿದ ಮೌಲ್ಯವುಳ್ಳ ಸ್ಟಾರ್ಟ್‌ಅಪ್ ಆಗುವ ಕನಸು ಕಾಣುತ್ತಿದೆ.
ಇಲ್ಲಿದೆ ನಿಂಬೆಯ ಹಲವು ‘ಔಷಧೀಯ’ ಪ್ರಯೋಜನಗಳು
“ನಾವು ಅದಾಗಲೇ 25 ಕೋಟಿ ರೂ.ಗಳ ಆರ್ಡರ್‌ಗಳಿಗೆ ಸಹಿ ಮಾಡಿದ್ದು, 65 ಕೋಟಿ ರೂ.ಗಳ ಆರ್ಡರ್‌ಗಳು ಇನ್ನೂ ಪೈಪ್‌ಲೈನ್‌ನಲ್ಲಿ ಇವೆ. ಸಾಂಕ್ರಮಿಕವು ತೀವ್ರವಾಗಿದ್ದ ಕಾಲಘಟ್ಟದಲ್ಲಿ ಸರ್ಕಾರದ ದೊಡ್ಡ ಸಂಖ್ಯೆಯ ಕಾಂಟ್ರಾಕ್ಟ್‌ಗಳಿಗೆ ಸೇವೆ ಒದಗಿಸುತ್ತಿದ್ದೆವು, ಆದರೆ ಈಗ ಕೃಷಿ ಕ್ಷೇತ್ರದಿಂದಲೂ ಸಹ ದೊಡ್ಡ ಮಟ್ಟದಲ್ಲಿ ಆರ್ಡರ್‌ಗಳು ಬರಲು ಆರಂಭಿಸಿವೆ. ಚೆನ್ನೈನಲ್ಲಿರುವ ನಮ್ಮ ಸವಲತ್ತಿನಲ್ಲಿ ವಿವಿಧ ವರ್ಗಗಳಿಂದ ಬರುವ ಬೇಡಿಕೆಗೆ ಅನುಗುಣವಾಗಿ ನಾವು 25-30 ಡ್ರೋನ್‌ಗಳನ್ನು ನಿರ್ಮಿಸುತ್ತಿದ್ದೇವೆ” ಎಂದಿದ್ದಾರೆ ಅಗ್ನೀಶ್ವರ್.