ಬೆಂಗಳೂರು: ಬಿಎಂಟಿಸಿ ತರಬೇತಿ ಕೇಂದ್ರದಿಂದ ಸಾರ್ವಜನಿಕರಿಗೆ ಲಘು ಮತ್ತು ಬಾರಿ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದೆ.
ಆಸಕ್ತರು ಅರ್ಜಿ ಸಲ್ಲಿಸಲು ಕೋರಲಾಗಿದೆ. 18 ವರ್ಷ ತುಂಬಿದವರಿಗೆ ಲಘು ವಾಹನ ಮತ್ತು 20 ವರ್ಷ ತುಂಬಿರುವವರಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡಲಾಗುತ್ತದೆ. ಆಸಕ್ತರು ಜನನ ಪ್ರಮಾಣ ಪತ್ರ ಅಥವಾ SSLC ಅಂಕಪಟ್ಟಿ, ಆಧಾರ್ ಕಾರ್ಡ್, 5 ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದು.
26 ದಿನಗಳ ಚಾಲನಾ ತರಬೇತಿ ನೀಡುವ ಜೊತೆಗೆ ವಾಹನ ಚಾಲನಾ ಪರವಾನಿಗೆಯನ್ನು ಬಿಎಂಟಿಸಿ ಮಾಡಿಸಿಕೊಡಲಿದೆ.
ಲಘು ವಾಹನ ಚಾಲನಾ ತರಬೇತಿಗೆ 7 ಸಾವಿರ ರೂಪಾಯಿ(ವಸತಿ ರಹಿತ), ವಸತಿ ಸಹಿತ 13,000 ರೂ. ಶುಲ್ಕ ನಿಗದಿಪಡಿಸಲಾಗಿದೆ. ಭಾರಿ ವಾಹನ ಚಾಲನಾ ತರಬೇತಿಗೆ ವಸತಿ ರಹಿತ 11,000 ರೂ., ವಸತಿ ಸಹಿತ 16,700 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಮಾಹಿತಿ ಮತ್ತು ನೋಂದಣಿಗಾಗಿ 77609 91085, 63648 58520 ಗೆ ಕರೆ ಮಾಡಬಹುದು. ಅಥವಾ ಮಾಗಡಿ ಮುಖ್ಯ ರಸ್ತೆಯ ವಡ್ಡರಹಳ್ಳಿಯಲ್ಲಿರುವ ಬಿಎಂಟಿಸಿ ಚಾಲಕರ ತರಬೇತಿ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ.