alex Certify ಚಾಲನಾ ಪರವಾನಗಿ ಪಡೆಯುವ ವೇಳೆ ಜನರು ಮಾಡ್ತಾರೆ ಈ ತಪ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲನಾ ಪರವಾನಗಿ ಪಡೆಯುವ ವೇಳೆ ಜನರು ಮಾಡ್ತಾರೆ ಈ ತಪ್ಪು

ಚಾಲನಾ ಪರವಾನಗಿ ಪಡೆಯುವ ವೇಳೆ ಆರ್.ಟಿ.ಒ. ಅಧಿಕಾರಿಗಳ ಮುಂದೆ ವಾಹನ ಚಲಾಯಿಸಿ ತೋರಿಸಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೇ ಚಾಲನಾ ಪರವಾನಗಿ ನೀಡಲಾಗುತ್ತದೆ.

ಪರೀಕ್ಷೆಗಾಗಿ, ವಾಹನಗಳನ್ನು ಚಾಲನೆ ಮಾಡುವಾಗ, ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಚಾಲನೆ ನಿಯಮ ತಪ್ಪಿದ್ರೆ ಚಾಲನಾ ಪರವಾನಗಿ ಸಿಗುವುದಿಲ್ಲ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಚಾಲನಾ ಪರವಾನಗಿ ಪಡೆಯಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಚಾಲನಾ ಪರವಾನಗಿಗೆ ಆನ್ಲೈನ್ ಅರ್ಜಿ ಜೊತೆಗೆ ರಾಜ್ಯಗಳಲ್ಲಿ ಆರ್‌ಟಿಒಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಚಾಲನಾ ಪರೀಕ್ಷೆಗೆ ಇನ್ನೂ ಹಲವು ನಿಯಮಗಳನ್ನು ಜೋಡಿಸಲಾಗಿದೆ. ಜನರು ಅನೇಕ ಕಾರಣಗಳಿಂದ ಚಾಲನಾ ಪರವಾನಗಿ ಪಡೆಯಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣವೇನು ಎಂಬುದರ ವಿವರ ಇಲ್ಲಿದೆ.

ದೇಶಾದ್ಯಂತ, ನಾಲ್ಕು ಚಕ್ರದ ವಾಹನ ಚಾಲನಾ ಪರೀಕ್ಷೆ ವೇಳೆ ಶೇಕಡಾ 31 ಜನರು ವಿಫಲವಾಗಲು ಕಾರಣ ರಿವರ್ಸ್. ವಾಹನವನ್ನು ಮುಂದೆ, ಬಲಕ್ಕೆ, ಎಡಕ್ಕೆ ತಿರುಗಿಸಲು ಬಲ್ಲವರು, ರಿವರ್ಸ್ ಪಡೆಯಲು ವಿಫಲರಾಗ್ತಾರೆ ಎಂದು ಸಚಿವಾಲಯ ಹೇಳಿದೆ.

ಲಿಖಿತ ಪರೀಕ್ಷೆಯಲ್ಲಿ ಶೇಕಡಾ 69ರಷ್ಟು ಅಂಕ ಪಡೆದವರು ಮಾತ್ರ ಮುಂದಿನ ಪರೀಕ್ಷೆ ನೀಡಲು ಅರ್ಹರಾಗಿರುತ್ತಾರೆ. ವಾಹನವನ್ನು ಬಲದಿಂದ ಎಡಕ್ಕೆ ಸೀಮಿತ ದೂರದಲ್ಲಿ ರಿವರ್ಸ್ ಮಾಡುವುದು ಮತ್ತು ಸರಿಯಾಗಿ ಚಾಲನೆ ಮಾಡುವುದು ಕಡ್ಡಾಯವಾಗಿರುತ್ತದೆ. ಪರೀಕ್ಷೆ ಅಪಾಯಿಂಟ್ಮೆಂಟ್ ಸಮಯದಲ್ಲಿ ಅರ್ಜಿದಾರರಿಗೆ ಕೇವಲ ಒಂದು ವೀಡಿಯೋ ಲಿಂಕ್ ನೀಡಲಾಗುವುದು. ಅದರಲ್ಲಿ ಚಾಲನಾ ಪರೀಕ್ಷೆಯ ಬಗ್ಗೆ ಸಂಪೂರ್ಣ ಮಾಹಿತಿ ಇರಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...