ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲಿಪುರದಲ್ಲಿ ಕಾrf ಕಲಿಯಲು ಹೋಗಿದ್ದ ಮಹಿಳೆಯೊಬ್ಬರು ಬಾಲಕಿ ಮೇಲೆ ಕಾರ್ ಹತ್ತಿಸಿದ್ದು, ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ.
ಕಗ್ಗಲಿಪುರದ ವೆಂಕಟೇಶ್ ಮತ್ತು ಲಕ್ಷ್ಮಿ ಎಂಬುವರ ಪುತ್ರಿ ನಾಗಲಕ್ಷ್ಮಿ(7) ಮೃತಪಟ್ಟ ಬಾಲಕಿ. ಮನೆಯ ಮುಂದೆ ನಾಗಲಕ್ಷ್ಮಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಪಕ್ಕದ ಮನೆ ಮಹಿಳೆ ಕಾರ್ ಕಲಿಯುವಾಗ ಬ್ರೇಕ್ ತುಳಿಯುವ ಬದಲು ಎಕ್ಸಲೇಟರ್ ಒತ್ತಿದ್ದು, ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಮೇಲೆ ಕಾರ್ ಹತ್ತಿದೆ. ಇದರಿಂದಾಗಿ ನಾಗಲಕ್ಷ್ಮಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ವಶಕ್ಕೆ ಪಡೆದು ಕಾರ್ ಸೀಜ್ ಮಾಡಲಾಗಿದೆ.