ಹಂತಹಂತವಾಗಿ ದೇಶದ ರಸ್ತೆಗಳಿಂದ ಹಳೆಯ ವಾಹನಗಳನ್ನು ತೆರವುಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಇದಕ್ಕಾಗಿ ವಾಹನ ಸ್ಕ್ರಾಪೇಜ್ ನೀತಿಯನ್ನು ಹೊರತಂದಿದೆ.
2022 ರ ಏಪ್ರಿಲ್ 1ರಿಂದ ಈ ಹೊಸ ನೀತಿಯಗಳು ಜಾರಿಗೆ ಬರಲಿವೆ. ಗ್ರಾಹಕರು ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕಿದಲ್ಲಿ ಅದಕ್ಕೆ ಪ್ರತಿಯಾಗಿ ಪ್ರೋತ್ಸಾಹ ಧನ ಪಡೆಯಲಿದ್ದಾರೆ. 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಹಾಗೂ 20 ವರ್ಷ ಮೇಲ್ಪಟ್ಟ ಪ್ರಯಾಣಿಕ ವಾಹನಗಳು ಫಿಟ್ನೆಸ್ ಹಾಗೂ ಮಾಲಿನ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗದೇ ಇದ್ದಲ್ಲಿ ಕಡ್ಡಾಯವಾಗಿ ಗುಜರಿಗೆ ಹೋಗಬೇಕಾಗುತ್ತದೆ.
ನಿಮ್ಮ ಮಕ್ಕಳೂ ಜಾಣರಾಗಬೇಕಾ….? ಹಾಗಾದರೆ ಓದುವ ಕೋಣೆಯ ಬಗ್ಗೆ ನೀವು ತಿಳಿಯಲೇಬೇಕು ಈ ಅಂಶ….!
ಸರ್ಕಾರೀ ಇಲಾಖೆಗಳ ವಾಹನಗಳು ಸಹ 15 ವರ್ಷಕ್ಕಿಂತ ಹಳೆಯದಾದರೆ ಗುಜರಿಗೆ ಹೋಗಲಿವೆ.
ಮಾಲಿನ್ಯ ಹಾಗೂ ಇಂಧನದ ಆಮದು ತಗ್ಗಲು ಹಾಗೂ ಹಳೆಯ ಬಿಡಿಭಾಗಗಳ ಮರುಬಳಕೆ, ಬದಲಿ ಉತ್ಪನ್ನಗಳ ಉತ್ಪಾದನೆಗೆ ಬೇಡಿಕೆ ಹೆಚ್ಚಳ ಹಾಗೂ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ಈ ನೀತಿಯಿಂದ ಸಾಕಷ್ಟು ಸಾಧ್ಯವಾಗಲಿದೆ.
ಹಾಸಿಗೆ ಮೇಲೆ ಮೂತ್ರ ಮಾಡಿಕೊಂಡ ಬಾಲಕನಿಗೆ ಮನಬಂದಂತೆ ಥಳಿಸಿದ ಪ್ರಾಂಶುಪಾಲ……!
ದೇಶದಲ್ಲಿ 17 ಲಕ್ಷಕ್ಕೂ ಹೆಚ್ಚಿನ ಮಧ್ಯಮ ಹಾಗೂ ಭಾರೀ ಗಾತ್ರದ ಹಳೆಯ ವಾಣಿಜ್ಯ ವಾಹನಗಳಿದ್ದು, 51 ಲಕ್ಷಕ್ಕೂ ಹೆಚ್ಚಿನ ಹಳೆಯ ಹಗುರ ಮೋಟರ್ ವಾಹನಗಳು ಯಾವುದೇ ಸೂಕ್ತವಾದ ಪ್ರಮಾಣ ಪತ್ರವಿಲ್ಲದೇ ಓಡಾಡುತ್ತಿವೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತಿಳಿಸಿದೆ.
ಈ ರಾಶಿಯವರಿಗೆ ಕಾದಿದೆ ಇಂದು ವೃತ್ತಿರಂಗದಲ್ಲಿ ಶುಭ ಸುದ್ದಿ…..!
ಹೊಸ ವ್ಯವಸ್ಥೆ ಪ್ರಕಾರ, ಹೊಸ ಮೋಟರ್ ಸೈಕಲ್‌ನ ನೋಂದಣಿ ಶುಲ್ಕ 300 ರೂ.ಗಳಾದರೆ, 15 ವರ್ಷ ಮೇಲ್ಪಟ್ಟ ವಾಹನದ ನೋಂದಣಿ ಶುಲ್ಕ 1,000 ರೂ.ಗಳಿರಲಿವೆ. ಹಳೆಯ ವಾಹನಗಳನ್ನು ಇಟ್ಟುಕೊಳ್ಳದಂತೆ ಜನರಿಗೆ ಪ್ರೇರಣೆ ನೀಡಲು ಈ ಹೆಚ್ಚಳವನ್ನು ಮಾಡಲಾಗಿದೆ.
ಇದೇ ರೀತಿ, ಹೊಸ ಕಾರಿನ ನೋಂದಣಿ ಶುಲ್ಕ 600 ರೂ.ಗಳಿಋಲಿದ್ದು, 15 ವರ್ಷ ಮೇಲ್ಪಟ್ಟ ಕಾರಿನ ನೋಂದಣಿ ಶುಲ್ಕವು 5,000 ರೂ.ಗಳಷ್ಟಿರಲಿದೆ.