ರೈಲ್ವೆ ಕ್ರಾಸಿಂಗ್ಗಳಲ್ಲಿ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲು ರಸ್ತೆ ಸಂಚಾರಿಗಳು ಕಾಯುವುದುಂಟು. ಇಲ್ಲೊಂದು ವಿಚಿತ್ರ ಸ್ವಾರಸ್ಯಕರ ಘಟನೆಯಲ್ಲಿ ರೈಲ್ವೆ ಹಳಿಯ ಮೇಲೆ ಆನೆ ಮರಿಯ ಕ್ರಾಸಿಂಗ್ಗೆ ರೈಲು ನಿಲುಗಡೆ ಮಾಡಿ ಸಹಕರಿಸಿದ ಪ್ರಸಂಗ ನಡೆದಿದೆ.
ಉತ್ತರ ಬಂಗಾಳದ ವಿಭಾಗೀಯ ರೈಲ್ವೇ ಮ್ಯಾನೇಜರ್ ಶೇರ್ ಮಾಡಿರುವ ವಿಡಿಯೋ ನೆಟ್ಟಿಗರಿಂದ ಪ್ರಶಂಸೆಗೆ ಪಾತ್ರವಾಗಿದೆ.
‘ಹಿಂದೂ’ ಎನ್ನುವುದು ಧರ್ಮವಲ್ಲ, ಅದೊಂದು ‘ಜೀವನ ಶೈಲಿ’; ಮಾಜಿ ಸಂಸದ ರಮೇಶ್ ಕತ್ತಿ ವಿವರಣೆ
ಆನೆಯೊಂದು ರೈಲ್ವೆ ಹಳಿಗಳಿಗೆ ಸಮೀಪದಲ್ಲಿ ಕಾಣಿಸಿಕೊಂಡಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ರೈಲು ಚಲಿಸುವಾಗ ಆನೆ ಕೂಡ ಹಳಿಮೇಲೆ ಅಡ್ಡಲಾಗಿ ಬರುತ್ತದೆ. ಆದರೆ, ಎಚ್ಚೆತ್ತ ಲೋಕೋ ಪೈಲಟ್ಗಳಾದ ಆರ್.ಆರ್. ಕುಮಾರ್ ಮತ್ತು ಎಸ್. ಕುಂದು ಸಮಯೋಚಿತವಾಗಿ ತುರ್ತು ಬ್ರೇಕ್ ಹಾಕಿದರು. ಜೊತೆಗೆ ಆನೆ ದಾಟಿಹೋಗುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಗುರುವಾರ ಬೆಳಗ್ಗೆ ಉತ್ತರ ಬಂಗಾಳದ ಗುಲ್ಮಾ-ಸಿವೋಕ್ ನಡುವೆ ರೈಲು ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈ ಹಿಂದೆ ಉತ್ತರ ಬಂಗಾಳದ ಜಲ್ಪೈಗುರಿ ಜಿಲ್ಲೆಯ ನಗ್ರಕಟಾ- ಚಾಲ್ಸಾ ನಡುವೆ ಇದೇ ರೀತಿಯ ಘಟನೆಯಲ್ಲಿ ಲೊಕೊ ಪೈಲಟ್ಗಳು ಸಕಾಲಿಕ ತುರ್ತು ಬ್ರೇಕ್ ಹಾಕಿ ಕಾಡು ಆನೆಯನ್ನು ರಕ್ಷಿಸಿದ್ದರು.