ಬೆಂಗಳೂರು: ಸಾರಿಗೆ ಸಂಸ್ಥೆಗಳಲ್ಲಿ ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಕಳೆದ ಎಂಟು ವರ್ಷಗಳಿಂದ ಯಾವುದೇ ನೇಮಕಾತಿ ಆಗಿರಲಿಲ್ಲ. ಈ ಸಂಬಂಧ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ 2016 ರಿಂದ ಇಲ್ಲಿಯವರೆಗೆ ಸಿಬ್ಬಂದಿಗಳ ನಿವೃತ್ತಿ ಹಾಗೂ ಇತರೆ ಕಾರಣಗಳಿಂದ 13,669 ಖಾಲಿಳಿ ಹುದ್ದೆಗಳಿದ್ದವು.
13,000 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸಾರಿಗೆ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು. ಮೊದಲನೇ ಹಂತದಲ್ಲಿ 6500 ಚಾಲನಾ ಸಿಬ್ಬಂದಿಗಳಿಗೆ, 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದಿಂದ ಅನುಮಾತಿ ದೊರೆತಿದೆ.
ಕೆ.ಎಸ್.ಆರ್.ಟಿ.ಸಿ. ಚಾಲಕರು ಮತ್ತು ನಿರ್ವಾಹಕರು 2000, ತಾಂತ್ರಿಕ ಸಿಬ್ಬಂದಿ 300, NWKRTC ಚಾಲಕ ಕಂ ನಿರ್ವಾಹಕರು 2000, ಬಿಎಂಟಿಸಿ ನಿರ್ವಾಹಕರು 2500, KKRTC ಯಲ್ಲಿ 1619 ಚಾಲನಾ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಚಾಲನಾ ಪರೀಕ್ಷೆ ನಡೆಯುತ್ತಿದ್ದು, 2024ರ ಜನವರಿ ಕೊನೆಯಲ್ಲಿ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗುವುದು.
ಕೆಎಸ್ಆರ್ಟಿಸಿಯಲ್ಲಿ 300 ಕಂಡಕ್ಟರ್ ಗಳ ನೇಮಕಾತಿಗೆ ಅನುಮತಿ ದೊರೆತಿದ್ದು, ಅಧಿಸೂಚನೆ ಹೊರಡಿಸುವ ಹಂತದಲ್ಲಿದೆ. ಒಟ್ಟಾರೆ 8719 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಯಲ್ಲಿದೆ.