ಬೆಂಗಳೂರು: ಬಾಕಿ ಇರುವ 16,000 ಸರ್ಕಾರಿ ವಾಹನ ಚಾಲಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಸರ್ಕಾರಿ ವಾಹನಗಳ ಚಾಲಕರು ಒತ್ತಾಯಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಸರ್ಕಾರಿ ವಾಹನಗಳಿಗೆ ಚಾಲಕರ ನೇಮಕಾತಿ ಆಗುತ್ತಿಲ್ಲ. ಮಂಜುರಾದ ಸುಮಾರು 24 ಸಾವಿರ ಚಾಲಕರ ಹುದ್ದೆಗಳಿದ್ದು, ದಶಕಗಳಿಂದ ನೇಮಕಾತಿ ಆಗದೇ ಚಾಲಕರ ನಿವೃತ್ತಿಯಿಂದ ಸುಮಾರು 7500 ಚಾಲಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
15,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇಲಾಖೆಗಳಿಗೆ ಅಗತ್ಯ ಇರುವ ವಾಹನಗಳನ್ನು ಸರ್ಕಾರ ಖರೀದಿಸಿ ಚಾಲಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ಚಾಲಕರಿಗೆ ಪದೋನ್ನತಿ ನೀಡಬೇಕು ಎಂಬ ಬೇಡಿಕೆ ಇದ್ದು, ಶೀಘ್ರವೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಸರ್ಕಾರಿ ವಾಹನಗಳ ಚಾಲಕರ ಸಂಘದ ಕಾರ್ಯದರ್ಶಿ ವಿಜಯಕುಮಾರ್ ತಿಳಿಸಿದ್ದಾರೆ.