
ಆಂಧ್ರ ಪ್ರದೇಶದ ಹೆದ್ದಾರಿಯೊಂದರಲ್ಲಿ ಭಯಾನಕ ರಸ್ತೆ ಅಪಘಾತ ಜರುಗಿದೆ. ಲಾರಿಗೆ ಡಿಕ್ಕಿ ಹೊಡೆದ ಟ್ರಕ್ ಒಂದಕ್ಕೆ ಬೆಂಕಿ ಹತ್ತಿಕೊಂಡು, ಟ್ರಕ್ ನಲ್ಲಿದ್ದ ಡ್ರೈವರ್ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾನೆ ಎಂದು ವರದಿಯಾಗಿದೆ.
ಈ ಭೀಕರ ರಸ್ತೆ ಅಪಘಾತ, ಆಂಧ್ರಪ್ರದೇಶದ ವಿಜಯನಗರದ ಕೊಮರಡ ಮಂಡಲದ ಅರ್ಥಮ್ ಬಳಿಯ ಹೆದ್ದಾರಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ವೇಗವಾಗಿ ಬಂದ ಟ್ರಕ್ ಒಂದು, ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಪುತ್ರ ವಿಧಿವಶ
ಈ ಅಪಘಾತದಲ್ಲಿ ಲಾರಿ ಚಾಲಕ, 52 ವರ್ಷದ ಸಾಂಬಯ್ಯ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಮೃತ ಸಾಂಬಯ್ಯ ಕುಳಿತಿದ್ದ, ಟ್ರಕ್ ಇದ್ದಕ್ಕಿದ್ದಂತೆ ಬೆಂಕಿ ಉಗುಳಿದೆ. ಡಿಕ್ಕಿ ಸಂಭವಿಸಿದ ನಂತರ ವಾಹನದಲ್ಲೆ ಸಿಲುಕಿಕೊಂಡ ಸಾಂಬಯ್ಯ, ಎಷ್ಟೇ ಪ್ರಯತ್ನಿಸಿದರು ಹೊರ ಬರಲು ಆಗದೇ, ಬೆಂಕಿಗೆ ಆಹುತಿಯಾಗಿದ್ದಾರೆ.
ಮೃತ ಸಾಂಬಯ್ಯ ಮೂಲತಃ ಆಂಧ್ರದ ಗುಂಟೂರು ಜಿಲ್ಲೆಯವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಅನಾಹುತದ ಬಗ್ಗೆ ಮಾಹಿತಿ ಪಡೆದ ಪಾರ್ವತಿಪುರಂ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.