ಮಾಸ್ಕೋ: ಮನೆ ಸುತ್ತ-ಮುತ್ತ ತೋಟದಲ್ಲಿ ನಿಂತ ನೀರಿನಲ್ಲಿ ಸಾವಿರಾರು ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಈ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗುತ್ತದೆ. ಆದರೆ ಎಂದಾದರೂ ಸೊಳ್ಳೆಗಳ ಸುಂಟರಗಾಳಿಯನ್ನು ನೋಡಿದ್ದೀರಾ..? ಇವರೇನು ಹೇಳುತ್ತಿದ್ದಾರೆ ಸೊಳ್ಳೆಗಳ ಸುಂಟರಗಾಳಿಯೇ ಎಂದು ಆಶ್ಚರ್ಯಪಡುತ್ತಿದ್ದೀರಾ..? ಹಾಗಿದ್ರೆ ಈ ಸ್ಟೋರಿ ಓದಿ..
ಹೌದು, ಈ ಘಟನೆ ನಡೆದಿರುವುದು ರಷ್ಯಾದಲ್ಲಿ. ಬೃಹತ್ ಪ್ರಮಾಣದ ಸೊಳ್ಳೆಗಳು ಸುಂಟರಗಾಳಿಯ ಆಕಾರವನ್ನು ಪಡೆದ ವಿಲಕ್ಷಣ ಘಟನೆಯನ್ನು ವಾಹನ ಚಾಲಕನೊಬ್ಬ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾನೆ. ಪೂರ್ವ ರಷ್ಯಾದ ಕಮ್ಚಟ್ಕಾ ಕ್ರೈ ಪ್ರದೇಶದಲ್ಲಿ ಈ ದೃಶ್ಯ ಕಂಡು ಬಂತು.
ಕೊರೊನಾಕ್ಕೆ ಹೆದರಿ 15 ತಿಂಗಳಿಂದ ಕತ್ತಲ ಕೋಣೆಯಲ್ಲಿ ಬಂಧಿಯಾಗಿತ್ತು ಈ ಕುಟುಂಬ
ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಇದೊಂದು ಸನ್ನಿಹಿತ ಪ್ಲೇಗ್ ನ ಸಂಕೇತ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ಸತ್ಯವೆಂದರೆ ಸೊಳ್ಳೆಗಳ ಸಮೂಹವು ನಿರುಪದ್ರವವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ‘’ಗಂಡು ಸೊಳ್ಳೆಗಳು ಬೆಚ್ಚಗಿನ ರಕ್ತದ ಪ್ರಾಣಿಗಳನ್ನು ಬೇಟೆಯಾಡುವುದಿಲ್ಲ. ಆದರೆ ಸಂಗಾತಿಯ ಸಲುವಾಗಿ ಒಂದು ಅಥವಾ ಹಲವಾರು ಹೆಣ್ಣು ಸೊಳ್ಳೆಗಳು ಸುತ್ತಲೂ ಸುತ್ತುತ್ತವೆ’’ ಎಂದು ಕೀಟಶಾಸ್ತ್ರಜ್ಞ ಲ್ಯುಡ್ಮಿಲಾ ಲೋಬ್ಕೊವಾ ಅವರು ಹೇಳಿದ್ದಾರೆ.
ಈ ದೃಶ್ಯ ಇದೇನು ಹೊಸದಲ್ಲ. ಈ ವರ್ಷದ ಫೆಬ್ರವರಿಯಲ್ಲಿ ಅರ್ಜಿಂಟೀನಾದ ಸ್ಕೈಸ್ ಇದೇ ರೀತಿಯ ದೃಶ್ಯಗಳಿಗೆ ಸಾಕ್ಷಿಯಾಗಿತ್ತು. ಹಲವಾರು ಸೊಳ್ಳೆಗಳು ಒಟ್ಟಿಗೆ ಸೇರಿಕೊಂಡು ಸುಂಟರಗಾಳಿ ರೂಪಿಸಿದ್ದವು.
https://www.youtube.com/watch?time_continue=2&v=i6jWJQ0K4mo&feature=emb_logo