“ನಮ್ಮ ಭಾರತ ದೇಶದಲ್ಲಿ ರಸ್ತೆ ಅಪಘಾತಗಳು ತುಂಬಾನೇ ಜಾಸ್ತಿ ಆಗ್ತಿದೆ. ಅದಕ್ಕೆ ನಮ್ಮ ದೇಶಕ್ಕೆ “ರಸ್ತೆ ಅಪಘಾತಗಳ ರಾಜಧಾನಿ” ಅಂತ ಹೆಸರು ಬಂದಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿರೋ ಪ್ರಕಾರ 2023 ರಲ್ಲಿ 4.80 ಲಕ್ಷಕ್ಕಿಂತ ಜಾಸ್ತಿ ಅಪಘಾತಗಳು ಆಗಿವೆ, ಅದರಲ್ಲಿ 1.72 ಲಕ್ಷ ಜನ ಸತ್ತಿದ್ದಾರೆ.
ಇದನ್ನು ತಡೆಯೋಕೆ ನೋಯ್ಡಾ ಅಧಿಕಾರಿಗಳು ಕೆಲವು ಹೊಸ ನಿಯಮಗಳನ್ನು ತಂದಿದ್ದಾರೆ. ಮಾರ್ಚ್ 1, 2025 ರಿಂದ ಈ ನಿಯಮಗಳು ಜಾರಿಗೆ ಬಂದಿವೆ.
- ಕುಡಿದು ಗಾಡಿ ಓಡಿಸಿದ್ರೆ 10,000 ರೂಪಾಯಿ ದಂಡ ಮತ್ತು 6 ತಿಂಗಳು ಜೈಲು.
- ವಿಮೆ ಇಲ್ಲದೆ ಗಾಡಿ ಓಡಿಸಿದ್ರೆ 2,000 ರೂಪಾಯಿ ದಂಡ ಮತ್ತು 3 ತಿಂಗಳು ಜೈಲು.
- ತುಂಬಾ ವೇಗವಾಗಿ ಗಾಡಿ ಓಡಿಸಿದ್ರೆ 5,000 ರೂಪಾಯಿ ದಂಡ.
- ಆಂಬುಲೆನ್ಸ್ ಗೆ ದಾರಿ ಕೊಡದೆ ಇದ್ರೆ 10,000 ರೂಪಾಯಿ ದಂಡ.
- ಗಾಡಿಯಲ್ಲಿ ಜಾಸ್ತಿ ಸಾಮಾನು ಹಾಕಿಕೊಂಡರೆ 20,000 ರೂಪಾಯಿ ದಂಡ.
- 18 ವರ್ಷದ ಒಳಗಿನ ಮಕ್ಕಳು ಅಪಘಾತ ಮಾಡಿದ್ರೆ, ಅವರ ಪೋಷಕರಿಗೆ 25,000 ರೂಪಾಯಿ ದಂಡ, 3 ವರ್ಷ ಜೈಲು ಮತ್ತು ಒಂದು ವರ್ಷ ಗಾಡಿಯ ರಿಜಿಸ್ಟ್ರೇಶನ್ ಕ್ಯಾನ್ಸಲ್ ಆಗುತ್ತೆ.
ಇನ್ನೂ ಸೀಟ್ ಬೆಲ್ಟ್ ಹಾಕದೆ ಇದ್ರೆ, ಮೊಬೈಲ್ ನಲ್ಲಿ ಮಾತಾಡ್ತಾ ಗಾಡಿ ಓಡಿಸಿದ್ರೆ, ಲೈಸೆನ್ಸ್ ಇಲ್ಲದೆ ಗಾಡಿ ಓಡಿಸಿದ್ರೆ 5,000 ರೂಪಾಯಿ ದಂಡ.
ಹಳೆ ದಂಡಗಳು ತುಂಬಾ ಕಡಿಮೆ ಇದ್ದವು, ಆದ್ರೆ ಹೊಸ ದಂಡಗಳು ತುಂಬಾ ಜಾಸ್ತಿ ಇವೆ. ಇದರಿಂದ ಜನರು ಭಯಪಟ್ಟು ಸರಿಯಾಗಿ ಗಾಡಿ ಓಡಿಸ್ತಾರೆ ಅಂತ ಅಧಿಕಾರಿಗಳು ಹೇಳ್ತಿದ್ದಾರೆ.
ಈ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಬಹುದು.