ನೂರು ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿ ‘ದೃಷ್ಟಿ ಬೊಟ್ಟು’ ಧಾರವಾಹಿ 31-12-2024 8:30PM IST / No Comments / Posted In: Featured News, Live News, Entertainment ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 6:30ಕ್ಕೆ ಪ್ರಸಾರವಾಗುವ ದೃಷ್ಟಿ ಬೊಟ್ಟು ಧಾರಾವಾಹಿ ಅಂದುಕೊಂಡಂತೆ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸೆಪ್ಟೆಂಬರ್ 9 ರಿಂದ ಪ್ರಸಾರವಾದ ಈ ಧಾರಾವಾಹಿ ಇದೀಗ 100 ಸಂಚಿಕೆಗಳನ್ನು ಪೂರೈಸಿದೆ. ಕಲರ್ಸ್ ಕನ್ನಡ ವಾಹಿನಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸಂತಸವನ್ನು ಹಂಚಿಕೊಂಡಿದೆ. ಶ್ರವಂತ್ ನಿರ್ದೇಶನದ ಈ ಧಾರಾವಾಹಿಯಲ್ಲಿ ನಟ ವಿಜಯ್ ಸೂರ್ಯ, ಅರ್ಪಿತಾ ಮೊಹಿತೆ, ಅಂಬಿಕಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತ ನ್ಮಯಾ ಕಶ್ಯಪ್, ದೀಪಶ್ರೀ ಪ್ರಭಾತ್, ಅಶೋಕ್ ಹೆಗ್ಡೆ, ಮೋಕ್ಷಿತಾ ವಸಿಷ್ಟ, ಸುಜಯ್ ಆರ್ ಹೆಗ್ಡೆ, ರವಿ ಚಂದ್ರ, ಗೀರಿಶ್ ಭಟ್, ವೀವೆಕ್ ಮಂಡ್ಯ, ಶ್ರೀ ಧನ್ಯ ಪಾಟೀಲ್, ಅನೂಪ್, ಸುಹಾನ ಸಂಜಯ್, ಮೌರ್ಯ ಗೌರವ್, ಗೌತಮಿ ಜಯರಾಮ್, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಕಿರುತೆರೆ ನಟ ರಕ್ಷಿತ್ ಗೌಡ ಈ ಧಾರಾವಾಹಿಯನ್ನು ಶ್ರೀ ಸಾಯಿ ಆಂಜನೇಯ ಕಂಪನಿ ಪ್ರೆಸೆಂಟ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. View this post on Instagram A post shared by Colors Kannada Official (@colorskannadaofficial)