
ದಾವಣಗೆರೆ: ಮದ್ಯವ್ಯಸನಿ ಪುತ್ರನೊಬ್ಬ ಕಲ್ಲು ಎತ್ತಿಹಾಕಿ ತಂದೆಯನ್ನು ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಡೆದಿದೆ.
60 ವರ್ಷದ ಮಂಜಪ್ಪ ಕೊಲೆಯಾದವರು. 32 ವರ್ಷದ ಪುತ್ರ ನರಸಿಂಹಪ್ಪನನ್ನ ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ನರಸಿಂಹಪ್ಪ ಕುಡಿಯಲು ಹಣ ಕೊಡುವಂತೆ ತಂದೆಯೊಂದಿಗೆ ಜಗಳವಾಡಿದ್ದಾನೆ. ತನ್ನ ಬಳಿ ಹಣವಿಲ್ಲವೆಂದು ಮಂಜಪ್ಪ ಹೇಳಿದ್ದಾರೆ.
ಈ ವೇಳೆ ಜಗಳವಾಡಿದ ನರಸಿಂಹಪ್ಪ ತಂದೆಯನ್ನು ಎಳೆದಾಡಿ ಕೆಳಗೆ ಬೀಳಿಸಿ ಮೈಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಂಜಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.