ಹೋಟೆಲ್ ಗೆ ಹೋಗ್ಲಿ ಇಲ್ಲ ಬೇರೆ ಯಾವುದೇ ಜಾಗಕ್ಕೆ ಹೋಗ್ಲಿ ಅಲ್ಲಿರುವ ನೀರನ್ನು ನಾವು ಸೇವನೆ ಮಾಡೋದಿಲ್ಲ. ಒಂದು ನಮ್ಮ ಕೈನಲ್ಲಿ ನೀರಿನ ಬಾಟಲಿ ಇರುತ್ತೆ ಇಲ್ಲವೆ ಫ್ಯೂರಿಫೈಯ್ ನೀರನ್ನು ದುಡ್ಡು ಕೊಟ್ಟು ಕುಡಿತೇವೆ. ಫ್ಯೂರಿಫೈಯ್ ಮಾಡಿದ ಎಲ್ಲ ನೀರನ್ನು ನಾವು ಬಿಸ್ಲರಿ ಎಂದೇ ಕರೆಯುತ್ತೇವೆ. ಬಿಸ್ಲರಿ ಒಂದು ಶುದ್ಧೀಕರಿಸಿದ ನೀರನ್ನು ಬಾಟಲಿಯಲ್ಲಿ ಮಾರಾಟ ಮಾಡುವ ಕಂಪನಿ ಅಷ್ಟೆ. 1970 ರ ದಶಕದಲ್ಲಿ ಬಿಸ್ಲೇರಿ ಮೂಲಕ ಭಾರತದಲ್ಲಿ ಬಾಟಲಿ ನೀರಿನ ಪರಿಚಯವಾಯ್ತು. ಆಗ ನೀರನ್ನು ಬಾಟಲಿಯಲ್ಲಿ ಮಾರಾಟ ಮಾಡ್ತಾರೆ ಎಂಬುದನ್ನು ಜನರು ನಂಬೋದು ಕಷ್ಟವಾಗಿತ್ತು. ಆದ್ರೀಗ ಈ ನೀರಿನ ಬಾಟಲಿ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಬಿಸ್ಲೇರಿ ಹೊರತುಪಡಿಸಿ ಅನೇಕ ಕಂಪನಿಗಳು ನೀರನ್ನು ಮಾರಾಟ ಮಾಡ್ತಿವೆ.
ಭಾರತ ಒಂದೇ ಅಲ್ಲ ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ನಾವು ಈ ನೀರಿನ ಬಾಟಲಿಯನ್ನು ನೋಡ್ಬಹುದು. ಆದ್ರೆ ಬೇರೆ ಬೇರೆ ದೇಶದಲ್ಲಿ ಈ ನೀರಿನ ಬಾಟಲಿ ಬೆಲೆ ಭಿನ್ನವಾಗಿದೆ.
ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ 330 ಎಂಎಲ್ ನೀರಿನ ಬಾಟಲಿಯ ಬೆಲೆಯಲ್ಲಿ ಭಾರಿ ವ್ಯತ್ಯಾಸವಿದೆ. ಬಾಂಗ್ಲಾದೇಶದಲ್ಲಿ 330 ಮಿಲಿ ನೀರಿನ ಬಾಟಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತದೆ. ಅಲ್ಲಿ 330 ಎಂಎಲ್ ನೀರಿನ ಬಾಟಲಿ ಬೆಲೆ 12.54 ರೂಪಾಯಿ. ಸ್ವಿಟ್ಜರ್ಲೆಂಡ್‌ನಲ್ಲಿ 330 ಮಿಲಿ ಬಾಟಲಿಯ ಗರಿಷ್ಠ ಬೆಲೆ 346.9 ರೂಪಾಯಿ. ಇನ್ನು ಭಾರತದಲ್ಲಿ 330 ಮಿಲಿ ನೀರಿನ ಬಾಟಲಿಯ ಬೆಲೆ ಸುಮಾರು 15.77 ರೂಪಾಯಿ. ಆಸ್ಟ್ರೇಲಿಯಾದಲ್ಲಿ ಇದ್ರ ಬೆಲೆ 186. 75 ರೂಪಾಯಿ ಇದೆ. ಪಾಕಿಸ್ತಾನದಲ್ಲಿ 14.94 ರೂಪಾಯಿಗೆ 330 ಮಿಲಿ ನೀರಿನ ಬಾಟಲಿ ಮಾರಾಟವಾಗುತ್ತದೆ.