
ಬೆಂಗಳೂರು: ಭೀಕರ ಬರಗಾಲದ ನಡುವೆ ಕೆಲ ದಿನಗಳ ಹಿಂದಷ್ಟೇ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿತ್ತು. ಹನಿ ನೀರಿಗೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಹೊತ್ತಲ್ಲೇ ಶಾಸಕ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನೀರಿನ ಮಹತ್ವ ಸಾರುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದಷ್ಟೇ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಎದುರಾದ ಸಂಕಷ್ಟ ಹೇಳತೀರದು. ಸರ್ಕಾರ ಟ್ಯಾಂಕರ್ ನೀರು ಪೂರೈಸಿದರೂ ಅದೆಷ್ಟೋ ಕಡೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗಿಲ್ಲ. ಇನ್ನು ಹಲವೆಡೆ ಟ್ಯಾಂಕರ್ ನೀರು ಗುಣಮಟ್ಟದಿಂದ ಕೂಡಿರಲಿಲ್ಲ. ಬೆಂಗಳೂರಿನಲ್ಲಿ ವಾಹನ ತೊಳೆದರೆ ದಂಡ ವಿಧಿಸಿದ ಘಟನೆ ಕೂಡ ನಡೆದಿತ್ತು. ಸದ್ಯ ಮಳೆ ಆರಂಭವಾಗಿರುವುದರಿಂದ ಕುಡಿಯುವ ನೀರಿನ ತತ್ವಾರ ಕೊಂಚ ಕಡಿಮೆಯಾಗಿದೆ. ಜನರು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಪ್ರತಿಯೊಬ್ಬರಿಗೂ ನೀರಿನ ಮಹತ್ವವನ್ನು ಅರ್ಥಮಾಡಿಸುವಂತಿದೆ.
ಬರಗಾಲದಿಂದ ಕುಡಿಯುವ ನೀರಿಗೂ ಜನರು ತತ್ತರಿಸುತ್ತಿರುವ ಗ್ರಾಮವೊಂದರಲ್ಲಿ ಯಾರೋ ಒಬ್ಬರು ಶವರ್ ತಂದು ಇಟ್ಟಿದ್ದರು. ಇದನ್ನು ನೋಡಿದ ವ್ಯಕ್ತಿಯೊಬ್ಬರು ನಿಧಾನವಾಗಿ ಹತ್ತಿರಕ್ಕೆ ಬಂದು ಬಾಗಿಲು ತೆರೆದು ನೋಡಿದ್ದಾರೆ. ಶವರ್ ನಿಂದ ನೀರು ಬರುವುದನ್ನು ಕಂಡು ಸಂಭ್ರಮಿಸಿದ್ದಾರೆ. ಕುಡಿಯುವ ನೀರಿಗೆ ತತ್ವಾರ ಎದುರಾಗಿದ್ದ ವೇಳೆ ಬರ ಪ್ರದೇಶದಲ್ಲಿ ಶವರ್ ಕಂಡು ಜೀವ ಜಲಕ್ಕಾಗಿ ಪರದಾಡುತ್ತಿದ್ದ ಗ್ರಾಮಸ್ಥರಿಗೆ ಹೋದ ಜೀವಬಂದಂತಾಗಿದೆ. ಮುಂದೇನಾಯ್ತು ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ.