ಏಲಕ್ಕಿಗಳನ್ನು ಹಾಗೇ ತಿನ್ನುವುದಕ್ಕಿಂತ ಅದನ್ನು ನೀರಿನಲ್ಲಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಅದೇನು ಅಂತೀರಾ. ನೀವೇ ನೋಡಿ.
* ಪ್ರತಿದಿನವೂ ಏಲಕ್ಕಿ ಕುದಿಸಿದ ನೀರನ್ನು ಕುಡಿಯುವ ಮೂಲಕ ವಾಕರಿಕೆ, ಹೊಟ್ಟೆಯಲ್ಲಿ ಆಮ್ಲೀಯತೆ, ಹೊಟ್ಟೆಯುಬ್ಬರಿಕೆ, ಹಸಿವಿಲ್ಲದಿರುವುದು, ಮಲಬದ್ಧತೆ ಮೊದಲಾದ ತೊಂದರೆಗಳಿಂದ ಪರಿಹಾರ ದೊರಕುತ್ತದೆ.
* ಈ ನೀರನ್ನು ನಿತ್ಯವೂ ಕುಡಿಯುವ ಮೂಲಕ ದೇಹದಲ್ಲಿರುವ ಕಲ್ಮಶಗಳನ್ನು ನಿವಾರಿಸುವುದು ಸುಲಭವಾಗುತ್ತದೆ. ವಿಶೇಷವಾಗಿ ಮೂತ್ರಪಿಂಡಗಳ ಕ್ಷಮತೆ ಹೆಚ್ಚುವ ಮೂಲಕ ಕಲ್ಮಶಗಳು ಹೆಚ್ಚು ನಿವಾರಣೆಯಾಗುತ್ತದೆ.
* ನಿತ್ಯವೂ ಏಲಕ್ಕಿ ನೀರನ್ನು ಕುಡಿಯುವ ಮೂಲಕ ಖಿನ್ನತೆಯ ವಿರುದ್ಧ ಹೋರಾಡುವ ಶಕ್ತಿ ಹೆಚ್ಚುತ್ತದೆ.
* ಏಲಕ್ಕಿ ನೀರನ್ನು ನಿತ್ಯವೂ ಕುಡಿಯುವ ಮೂಲಕ ಬಾಯಿಯಲ್ಲಿ ಹುಣ್ಣುಗಳಾಗುವುದು, ಸೋಂಕು ಹಾಗೂ ಗಂಟಲಿನಲ್ಲಿ ಆಗುವ ಕಿರಿಕಿರಿ ಮೊದಲಾದವುಗಳಿಂದ ರಕ್ಷಣೆ ದೊರಕುತ್ತದೆ.
* ಈ ಅದ್ಭುತ ನೀರನ್ನು ನಿತ್ಯವೂ ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಶೀತ, ಫ್ಲೂ ಮೊದಲಾದ ತೊಂದರೆಗಳಿಂದ ರಕ್ಷಣೆ ದೊರಕುತ್ತದೆ.
* ನಿತ್ಯವೂ ಏಲಕ್ಕಿ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಕಣಗಳ ಬೆಳವಣಿಗೆ ನಿಯಂತ್ರಿಸುತ್ತದೆ ಹಾಗೂ ಈ ಮೂಲಕ ಕ್ಯಾನ್ಸರ್ ಎದುರಾಗುವ ಸಂಭವ ಕಡಿಮೆಯಾಗುತ್ತದೆ.
* ಏಲಕ್ಕಿ ಉತ್ತಮ ಮೂತ್ರವರ್ಧಕವಾಗಿರುವ ಕಾರಣ ಹಾಗೂ ಇದರಲ್ಲಿ ಕರಗುವ ನಾರು ಉತ್ತಮ ಪ್ರಮಾಣದಲ್ಲಿರುವ ಕಾರಣ ಅಧಿಕ ರಕ್ತದೊತ್ತ ಡವನ್ನು ಕಡಿಮೆ ಮಾಡುತ್ತದೆ.