alex Certify ಅತಿಯಾದ ಬಿಸಿನೀರು ಸೇವನೆಯಿಂದ ದೇಹಕ್ಕೆ ಹಾನಿಯಾಗುತ್ತಾ….? ಇಲ್ಲಿದೆ ತಜ್ಞರು ನೀಡಿದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾದ ಬಿಸಿನೀರು ಸೇವನೆಯಿಂದ ದೇಹಕ್ಕೆ ಹಾನಿಯಾಗುತ್ತಾ….? ಇಲ್ಲಿದೆ ತಜ್ಞರು ನೀಡಿದ ಮಾಹಿತಿ

ಬಿಸಿ ನೀರು ಸೇವಿಸುವುದು ಮೃದುವಾದ ಪಚನ, ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಮೂತ್ರಪಿಂಡ ಸೇರಿದಂತೆ ಹಲವಾರು ಪ್ರಯೋಜನಗಳಿವೆ ಎಂದು ಕೇಳಿದ್ದಿರಾ. ಅದರಲ್ಲೂ ಕೊರೋನಾ ವೈರಸ್ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ, ಬಹುತೇಕ ಎಲ್ಲಾ ಭಾರತೀಯ ಮನೆಗಳಲ್ಲಿ ಬಿಸಿ ನೀರಿನ ಸೇವನೆಯು ಹೆಚ್ಚು ಕಡಿಮೆ ವಾಡಿಕೆಯಾಗಿದೆ.

ಬಿಸಿನೀರು ಸೇವಿಸುವುದರಿಂದ ನಾನಾ ಪ್ರಯೋಜಗಳಿದೆಯಾದರೂ, ಇದನ್ನೆ ಹೇರಳವಾಗಿ ಕುಡಿಯುತ್ತಿದ್ದರೆ ಹಲವು ನಕಾರತ್ಮಕ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ‌.‌

ಅತಿಯಾಗಿ ಬಿಸಿನೀರನ್ನು ಸೇವಿಸುವುದರಿಂದಾಗುವ ಕೆಲವು ಸಾಮಾನ್ಯ ಅಡ್ಡಪರಿಣಾಮಗಳು ಇಲ್ಲಿವೆ

ಮೂತ್ರಪಿಂಡ ಹಾನಿ

ಇದು ಅನೇಕರಿಗೆ ಆಘಾತವನ್ನು ಉಂಟುಮಾಡಬಹುದು, ಆದರೆ ಹೆಚ್ಚು ಬಿಸಿ ನೀರನ್ನ ಕುಡಿಯುವುದು ಮೂತ್ರಪಿಂಡಗಳ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತದೆ, ಅವುಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತದೆ. ನೀರು ನಮ್ಮ ಮೂತ್ರದ ವ್ಯವಸ್ಥೆಗೆ ಎಷ್ಟು ಅವಶ್ಯಕ ಎಂದು ತಿಳಿದೆ ಇದೆ, ಬಿಸಿನೀರಿನ ಬದಲು ಸಾಮಾನ್ಯ ನೀರು ಕುಡಿಯುವುದೆ ಉತ್ತಮ‌.

ರಕ್ತದೊತ್ತಡದ ಮೇಲೆ ಪರಿಣಾಮ

ಬಿಸಿನೀರು, ದೇಹದ ರಕ್ತದ ಪ್ರಮಾಣದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಬಿಸಿನೀರು, ರಕ್ತ ಪರಿಚಲನೆ ಮತ್ತು ಒತ್ತಡವನ್ನು ವೇಗವಾಗಿ ವರ್ಧಿಸುತ್ತದೆ.

ಜೀರ್ಣಕ್ರಿಯೆ ತೊಂದರೆಗಳು

ಹೊಟ್ಟೆ ಬೆಚ್ಚಗಾಗಬಾರದು ಎಂದು ನೀವು ಆಗಾಗ್ಗೆ ಕೇಳಿರಬಹುದು. ಬಿಸಿನೀರನ್ನು ಹೇರಳವಾಗಿ ಕುಡಿಯುವವರಲ್ಲಿ ಆಗಾಗ ಜೀರ್ಣಕ್ರಿಯೆ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಬಿಸಿ ನೀರು, ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಅದರಲ್ಲು ಖಾಲಿ ಹೊಟ್ಟೆಯಲ್ಲಿ ಬಿಸಿನೀರು ತೆಗೆದುಕೊಂಡರೆ ಜಠರದುರಿ ತೊಂದರೆಗಳಿಗೆ ಕಾರಣವಾಗುತ್ತದೆ.

ಮಾಲಿನ್ಯಕಾರಕಗಳ ನೆಲೆ

ಈ ದಿನಗಳಲ್ಲಿ ನೀರಿನ ಗುಣಮಟ್ಟವು ಒಂದು ಜಾಗತಿಕ ಕಾಳಜಿಯಾಗಿದೆ. ಬಿಸಿನೀರನ್ನ ಕಲುಷಿತಗಳಿಗೆ ಉತ್ತಮ ಸ್ನೇಹಿತ ಎನ್ನುತ್ತಾರೆ. ಏಕೆಂದರೆ ಬಿಸಿನೀರು ತಣ್ಣೀರಿಗಿಂತ ಹೆಚ್ಚು ಸುಲಭವಾಗಿ ಮಾಲಿನ್ಯಕಾರಕಗಳು ಮತ್ತು ವಿಷಗಳನ್ನು ಕರಗಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...