ಜನರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಆಪಲ್ ಸೈಡರ್ ವಿನೆಗರ್ ಅನ್ನು ಅಡುಗೆಮನೆಯಲ್ಲಿ ಇಡುತ್ತಾರೆ. ಆಪಲ್ ಸೈಡರ್ ವಿನೆಗರ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಪಲ್ ಸೈಡರ್ ವಿನೆಗರ್‌ನಿಂದ ಅನೇಕ ರೋಗಗಳ ಅಪಾಯವನ್ನು ತಡೆಯಬಹುದು ಅನ್ನೋದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ.
ತೂಕವನ್ನು ಕಳೆದುಕೊಳ್ಳುವ ಸಲುವಾಗಿ ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಆಪಲ್ ಸೈಡರ್ ವಿನೆಗರ್ ಅನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸಲಾಗುತ್ತದೆ. ಆದರೆ ಇದು ಸಂಪೂರ್ಣ ಸುರಕ್ಷಿತವಲ್ಲ. ಇದರಿಂದ ಅನೇಕ ದೈಹಿಕ ಸಮಸ್ಯೆಗಳು ಉಂಟಾಗಬಹುದು. ಖಾಲಿ ಹೊಟ್ಟೆಯಲ್ಲಿ ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸುವುದು ಹೇಗೆ ಅನ್ನೋದನ್ನು ನೋಡೋಣ.
ಖಾಲಿ ಹೊಟ್ಟೆಯಲ್ಲಿ ಆಪಲ್ ಸೈಡರ್ ವಿನಿಗರ್ ಕುಡಿಯುವುದರಿಂದಾಗುವ ಅಡ್ಡಪರಿಣಾಮಗಳು!
ಖಾಲಿ ಹೊಟ್ಟೆಯಲ್ಲಿ ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ದೇಹಕ್ಕೆ ಹಾನಿ ಉಂಟಾಗುತ್ತದೆ. ಗಂಟಲಿನ ಸೋಂಕಿನ ಅಪಾಯವೂ ಹೆಚ್ಚಾಗುತ್ತದೆ. ಇದಲ್ಲದೇ ಅಸಿಡಿಟಿ ಸಮಸ್ಯೆಯೂ ಬರಬಹುದು. ಹಗಾಗಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಸೂಕ್ತವಲ್ಲ. ಆಪಲ್ ಸೈಡರ್ ವಿನೆಗರ್ ಸಿಟ್ರಸ್ನ ರುಚಿ ಹೊಂದಿದೆ. ಅದಕ್ಕಾಗಿಯೇ ಇದನ್ನು ಅತಿಯಾಗಿ ಕುಡಿಯುವುದರಿಂದ ಹಲ್ಲುಗಳಿಗೆ ಹಾನಿ ಉಂಟಾಗುತ್ತದೆ.
ಪ್ರತಿದಿನ ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸುತ್ತಿದ್ದರೆ ಅದರ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಇದರಿಂದ ನಿಮ್ಮ ಹೊಟ್ಟೆ ಮತ್ತು ಹಲ್ಲುಗಳಿಗೆ ಹೆಚ್ಚಿನ ಹಾನಿಯಾಗುವುದಿಲ್ಲ. ಅತಿಯಾಗಿ ಸೇವನೆ ಮಾಡುವುದರಿಂದ ಹಲ್ಲು ಹುಳುಕಾಗುವುದು, ಕ್ಯಾವಿಟಿ ಸಮಸ್ಯೆ ಉಂಟಾಗುತ್ತದೆ.
ಆಪಲ್ ಸೈಡರ್ ವಿನೆಗರ್ ಅನ್ನು ನೀರಿಗೆ ಬೆರೆಸದೆ ನೇರವಾಗಿ ಕುಡಿದರೆ ಬೇಗ ತೆಳ್ಳಗಾಗುತ್ತೀರಿ ಎಂದುಕೊಳ್ಳಬೇಡಿ. ಒಂದು ಟೀ ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ದೊಡ್ಡ ಗ್ಲಾಸ್‌ನಷ್ಟು ನೀರಿಗೆ ಬೆರೆಸಿಯೇ ಕುಡಿಯಬೇಕು. ಗ್ಯಾಸ್ ಸಮಸ್ಯೆ ಇಲ್ಲದಿದ್ದರೆ ನಿಂಬೆರಸ ಬೆರೆಸಿ ಕೂಡ ಕುಡಿಯಬಹುದು.