alex Certify ವಿಮಾನ ಪ್ರಯಾಣದ ವೇಳೆ ಮದ್ಯಪಾನ ಪ್ರಾಣಕ್ಕೇ ತರಬಹುದು ಕುತ್ತು; ಹೊಸ ಸಂಶೋಧನೆಯಲ್ಲಿ ಬಯಲಾಗಿದೆ ಶಾಕಿಂಗ್‌ ಸಂಗತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಪ್ರಯಾಣದ ವೇಳೆ ಮದ್ಯಪಾನ ಪ್ರಾಣಕ್ಕೇ ತರಬಹುದು ಕುತ್ತು; ಹೊಸ ಸಂಶೋಧನೆಯಲ್ಲಿ ಬಯಲಾಗಿದೆ ಶಾಕಿಂಗ್‌ ಸಂಗತಿ….!

ಆಲ್ಕೋಹಾಲ್ ಅಪಾಯಕಾರಿ ಅನ್ನೋದು ಗೊತ್ತಿದ್ದರೂ ಅನೇಕರು ಅದನ್ನು ಸೇವನೆ ಮಾಡುತ್ತಾರೆ. ವಿಮಾನ ಪ್ರಯಾಣದ ಸಮಯದಲ್ಲಿ ಕೂಡ ಅನೇಕರು ಮದ್ಯ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಮದ್ಯಕ್ಕೆ ದಾಸರಾಗಿರುವವರು ಆಲ್ಕೋಹಾಲ್‌ ಸೇವನೆಯನ್ನು ಅನುಮತಿಸುವ ಮತ್ತು ಇಂತಹ ಪಾನೀಯಗಳು ಲಭ್ಯವಿರುವ ವಿಮಾನಗಳನ್ನೇ ಬುಕ್‌ ಮಾಡುತ್ತಾರೆ. ವಿಶೇಷವಾಗಿ ಬಿಸನೆಸ್‌ ಕ್ಲಾಸ್‌ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ನೀಡಲಾಗುತ್ತದೆ. ಕೆಲವರು ವಿಮಾನದಲ್ಲಿ ಮದ್ಯ ಸೇವಿಸುವ ಮೂಲಕ ಪ್ರಯಾಣವನ್ನು ಎಂಜಾಯ್‌ ಮಾಡಿದ್ರೆ ಇನ್ನು ಕೆಲವರು ಆಲ್ಕೋಹಾಲ್‌ ನಡುಗುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ನಂಬುತ್ತಾರೆ.

ವಿಮಾನಗಳಲ್ಲಿ ಮದ್ಯ ಪೂರೈಕೆ ಕುರಿತಂತೆ ಸಾಕಷ್ಟು ಪರ-ವಿರೋಧ ಚರ್ಚೆಗಳಾಗಿವೆ. ಆದ್ರೀಗ ಈಗ ಜರ್ಮನ್ ಏರೋಸ್ಪೇಸ್ ಸೆಂಟರ್ ಮತ್ತು ಆರ್‌ಡಬ್ಲ್ಯೂಟಿಎಚ್ ಆಚೆನ್ ವಿಶ್ವವಿದ್ಯಾಲಯದ ಸಂಶೋಧಕರು ಪ್ರಕಟಿಸಿದ ಅಧ್ಯಯನ ವರದಿ ಆಘಾತಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದೆ. ವಿಮಾನ ಪ್ರಯಾಣ ಮಾಡುವಾಗ ಮದ್ಯ ಸೇವನೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ.

ಆಮ್ಲಜನಕದ ಕೊರತೆ

ವಿಮಾನ ಪ್ರಯಾಣದ ಸಮಯದಲ್ಲಿ, ವಿಮಾನದ ಕ್ಯಾಬಿನ್‌ನಲ್ಲಿ ಕೃತಕ ಒತ್ತಡವನ್ನು ರಚಿಸಲಾಗುತ್ತದೆ. ಇದು ಸಮುದ್ರ ಮಟ್ಟದಲ್ಲಿ ಗಾಳಿಯ ಒತ್ತಡಕ್ಕೆ ಅನುಗುಣವಾಗಿಲ್ಲ. ಆದರೆ ಸರಿಸುಮಾರು 2,500 ಮೀಟರ್ ಎತ್ತರದಲ್ಲಿದೆ. ಮಧ್ಯಮ ಗಾತ್ರದ ಪರ್ವತದ ತುದಿಯಲ್ಲಿರುವಂತೆ.

ಎತ್ತರ ಹೆಚ್ಚಾದಷ್ಟೂ ಗಾಳಿಯ ಒತ್ತಡ ಕಡಿಮೆಯಾಗುತ್ತದೆ. ಕಡಿಮೆ ಗಾಳಿಯ ಒತ್ತಡ, ರಕ್ತದಲ್ಲಿನ ಆಮ್ಲಜನಕದ ಶುದ್ಧತ್ವವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ಆಮ್ಲಜನಕದ ಶುದ್ಧತೆ ಸುಮಾರು 90 ಪ್ರತಿಶತದಷ್ಟಿರುತ್ತದೆ. ಆದರೆ ಅದಕ್ಕಿಂತ ಕಡಿಮೆಯಾದಾಗ ಸ್ನಾಯುಗಳು ಮತ್ತು ಅಂಗಗಳು ಆಮ್ಲಜನಕ ಪಡೆಯುವುದನ್ನು ನಿಲ್ಲಿಸುತ್ತವೆ. ಏಕೆಂದರೆ ದೇಹವು ಮೆದುಳಿಗೆ ಆಮ್ಲಜನಕವನ್ನು ಪೂರೈಸಲು ಪ್ರಯತ್ನಿಸುತ್ತದೆ.

ಆಮ್ಲಜನಕದ ಕೊರತೆಯು ತಲೆತಿರುಗುವಿಕೆ ಅಥವಾ ವಾಕರಿಕೆಗೆ ಕಾರಣವಾಗಬಹುದು. ಪ್ರಯಾಣಿಕರು ಸಾಮಾನ್ಯಕ್ಕಿಂತ ಆಳವಾಗಿ ಅಥವಾ ವೇಗವಾಗಿ ಉಸಿರಾಡಲು ಪ್ರಾರಂಭಿಸಬಹುದು. ಇವೆಲ್ಲ ಮದ್ಯ ಸೇವನೆಯಿಂದ ಸಂಭವಿಸುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ ನಿದ್ರೆಯ ಸಮಯದಲ್ಲಿ ಆಲ್ಕೋಹಾಲ್ನಿಂದ ಹೃದಯ ಬಡಿತದ ಹೆಚ್ಚಳವಾಗಿ ಅದು ಸಹ ಆಮ್ಲಜನಕದ ಕೊರತೆಗೆ ಕಾರಣವಾಗಬಹುದು.

ಈ ಕುರಿತ ಅಧ್ಯಯನಕ್ಕಾಗಿ ನಿದ್ರೆಯ ಪ್ರಯೋಗಾಲಯದಲ್ಲಿ ಸಾಮಾನ್ಯ ಸುತ್ತುವರಿದ ಒತ್ತಡದೊಂದಿಗೆ ಪರೀಕ್ಷೆ ಮತ್ತು ವಿಮಾನದ ಕ್ಯಾಬಿನ್‌ನಂತೆಯೇ ಗಾಳಿಯ ಒತ್ತಡವನ್ನು ಒಳಗೊಂಡಿರುವ ಎತ್ತರದ ಕೊಠಡಿಯಲ್ಲಿ ಪರೀಕ್ಷೆ ಮಾಡಲಾಗಿದೆ. ಪ್ರತಿ ಗುಂಪಿನಲ್ಲಿ ಕೆಲವರು ಮಲಗುವ ಮುನ್ನ ಮದ್ಯಪಾನ ಮಾಡಿದರು ಮತ್ತು ಇತರರು ಕುಡಿಯಲಿಲ್ಲ.

ಮದ್ಯ ಕುಡಿದು ಮಲಗಿರುವಾಗ ಸಿಮ್ಯುಲೇಟೆಡ್ ಏರ್‌ಪ್ಲೇನ್ ಕ್ಯಾಬಿನ್‌ನಲ್ಲಿ ಸರಾಸರಿ ಹೃದಯ ಬಡಿತಗಳು ಪ್ರತಿ ನಿಮಿಷಕ್ಕೆ 88ರಷ್ಟು ಹೆಚ್ಚಾಗುತ್ತವೆ. ಅವರ ಆಮ್ಲಜನಕದ ಶುದ್ಧತೆ ಸರಿಸುಮಾರು 85 ಪ್ರತಿಶತಕ್ಕೆ ಕುಸಿದಿತ್ತು.

ಈ ವ್ಯತ್ಯಾಸ ಮೊದಲ ನೋಟದಲ್ಲಿ ಅಷ್ಟು ಗಂಭೀರವಾಗಿ ಕಾಣುವುದಿಲ್ಲ. ಆದರೆ ವಯಸ್ಸಾದವರು ಅಥವಾ ಅನಾರೋಗ್ಯ ಪೀಡಿತರಿಗೆ ಇದು ಹೆಚ್ಚು ಮಾರಕವಾಗಬಹುದು. ಕಡಿಮೆ ಆಮ್ಲಜನಕ ಪೂರೈಕೆ ಮತ್ತು ಹೃದಯ ಬಡಿತದಲ್ಲಿ ಗಮನಾರ್ಹ ಹೆಚ್ಚಳ ಜೀವಕ್ಕೆ ಅಪಾಯಕಾರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...