ಕೊಚ್ಚಿ: ಖಾಸಗಿ ಸ್ಥಳದಲ್ಲಿ ಮದ್ಯಪಾನ ಮಾಡುವುದು ಅಪರಾಧವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕುಡುಕರು ಗಲಾಟೆ ಮಾಡದ ಹೊರತು ಖಾಸಗಿ ಸ್ಥಳದಲ್ಲಿ ಮದ್ಯ ಸೇವನೆ ಅಪರಾಧವಲ್ಲ ಎಂದು ಸರ್ಕಾರಿ ನೌಕರನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.
ಕೇವಲ ಮದ್ಯದ ವಾಸನೆಯಿಂದ ವ್ಯಕ್ತಿಯು ಕುಡಿದಿದ್ದಾನೆ ಅಥವಾ ಯಾವುದೇ ರೀತಿಯಲ್ಲಿ ಮದ್ಯದ ಅಮಲಿನಲ್ಲಿದ್ದ ಎಂದು ಅರ್ಥೈಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಖಾಸಗಿ ಸ್ಥಳದಲ್ಲಿ ಯಾರಿಗಾದರೂ ತೊಂದರೆ ನೀಡದಂತೆ ಮದ್ಯಪಾನ ಮಾಡುವುದು ಅಪರಾಧವಲ್ಲ ಎಂದು 38 ವರ್ಷದ ಸಲೀಂ ಕುಮಾರ್ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ನ್ಯಾಯಮೂರ್ತಿ ಸೋಫಿ ಥಾಮಸ್ ಆದೇಶಿಸಿದ್ದಾರೆ. ನ. 10 ರಂದು ಹೈಕೋರ್ಟ್ ತನ್ನ ಆದೇಶದಲ್ಲಿ ಈ ಬಗ್ಗೆ ತಿಳಿಸಿದೆ. 2013 ರಲ್ಲಿ ತನ್ನ ವಿರುದ್ಧ ಪೊಲೀಸರು ದಾಖಲಿಸಿದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಸರ್ಕಾರಿ ನೌಕರ ಮನವಿ ಸಲ್ಲಿಸಿದ್ದರು.