alex Certify ಕಿಡ್ನಿ ಸ್ಟೋನ್ ನಿವಾರಣೆಗಾಗಿ ಇದನ್ನು ಬೆರೆಸಿದ ನೀರು ಕುಡಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಡ್ನಿ ಸ್ಟೋನ್ ನಿವಾರಣೆಗಾಗಿ ಇದನ್ನು ಬೆರೆಸಿದ ನೀರು ಕುಡಿಯಿರಿ

ಸರಿಯಾಗಿ ನೀರು ಕುಡಿಯದಿದ್ದಾಗ ಮೂತ್ರದ ಪ್ರಮಾಣ ಕಡಿಮೆಯಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ಉತ್ಪತ್ತಿಯಾಗುತ್ತದೆ. ಇದು ತುಂಬಾ ನೋವನ್ನು ಉಂಟು ಮಾಡುತ್ತದೆ. ಈ ಕಲ್ಲುಗಳನ್ನು ನಿವಾರಿಸಿ ಮೂತ್ರಪಿಂಡವನ್ನು ಸ್ವಚ್ಚಗೊಳಿಸಲು ಈ ಮನೆಮದ್ದನ್ನು ಸೇವಿಸಿ.

*ನಿಂಬೆ ರಸ : ಪ್ರತಿದಿನ ಒಂದು ಗ್ಲಾಸ್ ನೀರಿಗೆ ನಿಂಬೆ ರಸವನ್ನು ಮಿಕ್ಸ್ ಮಾಡಿ ಕುಡಿಯುವುದರಿಂದ ಮೂತ್ರದ ಕಲ್ಲು ನಿವಾರಣೆಯಾಗುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರೇಟ್ ಅಂಶವಿರುವುದರಿಂದ ಇದು ಮೂತ್ರದ ಕಲ್ಲುಗಳನ್ನು ಒಡೆಯಲು ಸಹಕಾರಿಯಾಗಿದೆ.

*ಆ್ಯಪಲ್ ಸೈಡರ್ ವಿನೆಗರ್ ಕೂಡ ಸಿಟ್ರಿಕ್ ಆಮ್ಲವನ್ನು ಹೊಂದಿದೆ. ಇದನ್ನು ಪ್ರತಿದಿನ ಒಂದು ಗ್ಲಾಸ್ ನೀರಿಗೆ 1 ಚಮಚ ಮಿಕ್ಸ್ ಮಾಡಿ ಕುಡಿದರೆ ಮೂತ್ರಪಿಂಡದಲ್ಲಿರುವ ಕಲ್ಲು ಕರಗುತ್ತದೆ.

*ತೆಂಗಿನ ಕಾಯಿ ನೀರು ದೇಹದಲ್ಲಿ ಮೂತ್ರದ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ತೆಂಗಿನಕಾಯಿ ನೀರನ್ನು ಸೇವಿಸುವುದರಿಂದ ಮೂತ್ರದ ಕಲ್ಲು ಕರಗುತ್ತದೆ ಮತ್ತು ನೋವು ನಿವಾರಣೆಯಾಗುತ್ತದೆ.

*ಅಡುಗೆ ಸೋಡಾ ಮೂತ್ರ ಕಲ್ಲಿನ ಉತ್ಪತ್ತಿಗೆ ಕಾರಣವಾಗುವ ಆಮ್ಲೀಯ ಅಂಶವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನೀರಿಗೆ ಅಡುಗೆ ಸೋಡಾ ಮಿಕ್ಸ್ ಮಾಡಿ ಕುಡಿದರೆ ಮೂತ್ರದ ಕಲ್ಲು ಸಮಸ್ಯೆ ನಿವಾರಣೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...