ಸೂರ್ಯ, ಮಳೆಬಿಲ್ಲು ಎಲ್ಲದರಲ್ಲಿಯೂ ಏಳು ಬಣ್ಣಗಳಿರುತ್ತವೆ. ಜೀವನದಲ್ಲೂ ಏಳು ಬಣ್ಣಗಳಿಗೆ ಮಹತ್ವದ ಪಾತ್ರವಿದೆ. ಈ ಬಣ್ಣ ನಿಮ್ಮ ಜೀವನದ ಅನೇಕ ರೋಗಗಳನ್ನು ಕಡಿಮೆ ಮಾಡುತ್ತದೆ. ಏಳು ದಿನಗಳ ಕಾಲ ಶುದ್ಧ ಗ್ಲಾಸ್ ನಲ್ಲಿ ನೀರನ್ನು ಬಿಸಿಲಿನಲ್ಲಿಡಿ.
ಏಳು ದಿನ ಬಿಸಿಲಿನಲ್ಲಿಟ್ಟ ನಂತ್ರ ಕೆಂಪು ಬಣ್ಣದ ಗ್ಲಾಸ್ ಬಾಟಲ್ ನಲ್ಲಿ ಈ ನೀರನ್ನು ಹಾಕಿ ಕುಡಿದ್ರೆ ಜ್ವರ, ನೆಗಡಿ, ತಲೆನೋವು, ಹೊಟ್ಟೆ ನೋವನ್ನು ಕಡಿಮೆಯಾಗುತ್ತದೆ.
ಹಸಿರು ಅಥವಾ ನೇರಳೆ ಬಣ್ಣದ ಗಾಜಿನ ಬಾಟಲಿಯಲ್ಲಿ ಹಾಕಿ ಕುಡಿದರೆ ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ.
ಹಳದಿ ಬಣ್ಣದ ಗಾಜಿನ ಬಾಟಲಿಗೆ ಹಾಕಿ ಕುಡಿಯುವುದರಿಂದ ಗಾಯ ಬೇಗ ಗುಣವಾಗುತ್ತದೆ.
ಕಿತ್ತಳೆ ಬಣ್ಣದ ಗಾಜಿನ ಬಾಟಲಿಯಲ್ಲಿ ನೀರು ಹಾಕಿ ಕುಡಿದರೆ ನಿದ್ರಾಹೀನತೆ ಕಡಿಮೆಯಾಗುತ್ತದೆ.
ನೀಲಿ ಬಣ್ಣದ ಗಾಜಿನ ಬಾಟಲಿಯಲ್ಲಿ ಬಿಸಿಲಿನಲ್ಲಿಟ್ಟ ನೀರನ್ನು ಹಾಕಿ, ಆ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ಆಕಾಶ ಬಣ್ಣದ ಗಾಜಿನ ಬಾಟಲಿಯಲ್ಲಿ ನೀರು ಕುಡಿದ್ರೆ ಶೀತ ಹಾಗೂ ನೆಗಡಿ ಕಡಿಮೆಯಾಗುತ್ತದೆ.