ದೇಹದ ತೂಕ ಹೆಚ್ಚಳವಾದರೆ ಎಲ್ಲರಿಗೂ ಚಿಂತೆ ಕಾಡಲು ಶುರುವಾಗುತ್ತೆ. ಹೇಗೆ ಕೊಬ್ಬನ್ನು ಕರಗಿಸಿಕೊಳ್ಳುವುದು, ಸಣ್ಣಗೆ ಕಾಣಿಸಿಕೊಳ್ಳುವುದು ಎಂದು ಯೋಚಿಸಲು ಶುರು ಮಾಡುತ್ತಾರೆ. ಜಿಮ್ ಅಥವಾ ಡಯೆಟ್ ಎಲ್ಲರಿಗೂ ಮಾಡುವುದಕ್ಕೆ ಆಗುವುದಿಲ್ಲ. ಮನೆಯಲ್ಲಿಯೇ ಸಿಗುವ ವಸ್ತುವನ್ನು ಉಪಯೋಗಿಸಿಕೊಂಡು ನಮ್ಮ ದೇಹದ ತೂಕ ಸುಲಭವಾಗಿ ಇಳಿಸಿಕೊಳ್ಳಬಹುದು.
ಮೆಂತೆಕಾಳು ದೇಹದ ತೂಕವನ್ನು ಇಳಿಸಿಕೊಳ್ಳುವವರಿಗೆ ಬೆಸ್ಟ್ ಟಿಪ್ಸ್ ಎನ್ನಬಹುದು. ಇದನ್ನು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ದೇಹದ ಕೊಬ್ಬನ್ನು ಕರಗಿಸುತ್ತದೆ. ಇದರಲ್ಲಿ 45%ರಿಂದ 50% ವರೆಗೆ ಡಯೆಟ್ರಿ ಫೈಬರ್ ಇದೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಹಾಗೇ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ.
ಅರ್ಧ ಕಪ್ ಮೆಂತೆ ಕಾಳುಗಳನ್ನು ತೆಗೆದುಕೊಳ್ಳಿ. ಇದನ್ನು ಒಂದು ಪ್ಯಾನ್ ಗೆ ಹಾಕಿ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ. ಪರಿಮಳ ಬರುವವರಗೆ ಹುರಿಯಿರಿ. ನಂತರ ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ. ಇದನ್ನು ಒಂದು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಕೊಳ್ಳಿ.
ಇದನ್ನು ನೀವು ಮಾಡುವ ಸಾಂಬಾರು, ಪಲ್ಯಕ್ಕೆ ಸ್ವಲ್ಪ ಸ್ವಲ್ಪ ಹಾಕಿ. ಇಲ್ಲದಿದ್ದರೆ ಒಂದು ಗ್ಲಾಸ್ ನೀರಿಗೆ ಅಥವಾ ಹಾಲಿಗೆ 1 ಟೇಬಲ್ ಸ್ಪೂನ್ ಮೆಂತೆ ಪುಡಿ ಸೇರಿಸಿಕೊಂಡು ಕುಡಿಯಿರಿ. ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ.