ಆರೋಗ್ಯಕರವಾದ ತ್ವಚೆ ನಮ್ಮದಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಜೀವನಶೈಲಿಯ ಬದಲಾವಣೆ, ಆಹಾರದ ಪದ್ಧತಿಯಿಂದ ಮುಖದ ಚರ್ಮ ಕಾಂತಿ ಹೀನವಾಗುತ್ತದೆ.
ಕೆಲವೊಂದು ಟಿಪ್ಸ್ ಅನ್ನು ಅನುಸರಿಸುವುದರಿಂದ ನಮ್ಮ ತ್ವಚೆಯ ರಕ್ಷಣೆಯನ್ನು ಮಾಡಿಕೊಳ್ಳಬಹುದು. ಯಾವ ರೀತಿ ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.
ವಿಟಮಿನ್ ಸಿ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನನಿತ್ಯದ ಆಹಾರದಲ್ಲಿ ವಿಟಮಿನ್ ಸಿ ಇರುವ ಆಹಾರವನ್ನು ಹೆಚ್ಚೆಚ್ಚು ಸೇವಿಸಿದರೆ ಚರ್ಮವು ಕಾಂತಿಯುತವಾಗುತ್ತದೆ.
ಕಿತ್ತಳೆಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಕಿತ್ತಳೆಯನ್ನು ಹಾಗೇ ತಿನ್ನುವುದರಿಂದ ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ನಿಮ್ಮ ತ್ವಚೆಯ ಕಾಂತಿ ಹೆಚ್ಚುತ್ತದೆ. ಕಿತ್ತಳೆ ಹಾಗೂ ಸ್ವಲ್ಪ ಶುಂಠಿಯನ್ನು ಸೇರಿಸಿಕೊಂಡು ಜ್ಯೂಸ್ ಮಾಡಿಕೊಂಡು ಕುಡಿದರೆ ನಿಮ್ಮ ಚರ್ಮ ನಳನಳಿಸುತ್ತದೆ.
ಮಾವಿನಹಣ್ಣಿನಲ್ಲಿ ಕೂಡ ವಿಟಮಿನ್ ಸಿ ಹೇರಳವಾಗಿದೆ. ಬೇಸಿಗೆಯಲ್ಲಿ ಇದು ಯಥೇಚ್ಚವಾಗಿ ಸಿಗುತ್ತದೆ. ಆಯಾ ಕಾಲದಲ್ಲಿ ಸಿಗುವ ಹಣ್ಣನ್ನು ಚೆನ್ನಾಗಿ ತಿನ್ನಿರಿ. ಮಾವಿನಹಣ್ಣು ಹಾಗೂ ಕಿವಿ ಪ್ರೂಟ್ಸ್ ಸೇರಿಸಿಕೊಂಡು ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ನಿಮ್ಮ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕಿವಿ ಪ್ರೂಟ್ಸ್ ಹಾಗೂ ಲಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇವೆರೆಡನ್ನೂ ಸೇರಿಕೊಂಡು ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ಕೂಡ ಚರ್ಮದ ಆರೋಗ್ಯಕ್ಕೆ ಒಳ್ಳೆಯದು.
ಫೈನಾಪಲ್ ನಲ್ಲಿಯೂ ವಿಟಮಿನ್ ಸಿ ಹೇರಳವಾಗಿದೆ. ಈ ಜ್ಯೂಸ್ ಅನ್ನು ನಿಮ್ಮ ಡಯೆಟ್ ಪ್ಲ್ಯಾನ್ ನಲ್ಲಿ ಸೇರಿಸಿಕೊಳ್ಳಿ.