ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಏರಿಕೆಯಾಗುವುದರಿಂದ ಹೃದಯಾಘಾತ, ಪಾಶ್ವವಾಯುವಿನಂಥ ಮಾರಕ ರೋಗಗಳು ನಿಮ್ಮನ್ನು ಹಿಂಡಿ ಹಾಕಬಹುದು. ಅದರ ಬದಲು ಈ ಪಾನೀಯವನ್ನು ವಾರಕ್ಕೆರಡು ಬಾರಿ ನೀವೇ ತಯಾರಿಸಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ನಿಮ್ಮ ದೇಹದಲ್ಲಿ ಸಂಗ್ರಹವಾಗುವುದನ್ನು ತಪ್ಪಿಸಬಹುದು.
ಇದಕ್ಕೆ ಒಂದು ಕಿತ್ತಳೆ ಹಣ್ಣು, ಪಪ್ಪಾಯ ಹಣ್ಣಿನ ಕಾಲು ಭಾಗ, ಒಂದು ಬಾಳೆ ಹಣ್ಣನ್ನು ತೆಗೆದುಕೊಳ್ಳಿ. ಇವುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿ. ಐಸ್ ಕ್ಯೂಬ್ ಬಳಸಿ. ಬಳಿಕ ಸೋಸಿ ಕುಡಿಯಿರಿ. ಹೀಗೆ ಮಾಡಿ ಸೇವಿಸುವುದರಿಂದ ಏನು ಲಾಭ ಎಂದಿರಾ?
ಈ ಜ್ಯೂಸ್ ನಲ್ಲಿ ಪೊಟ್ಯಾಶಿಯಂ ಮತ್ತು ವಿಟಮಿನ್ ಸಿ ಸಾಕಷ್ಟಿದ್ದು ದೇಹಕ್ಕೆ ಅಗತ್ಯವಿರುವ ನಾರಿನಂಶವೂ ಲಭ್ಯವಾಗುತ್ತದೆ. ಇದರಿಂದ ಹೃದಯಬಡಿತ ಸಹಜಸ್ಥಿತಿಗೆ ಬರುತ್ತದೆ. ಕೊಲೆಸ್ಟ್ರಾಲ್ ಸಂಗ್ರಹವಾಗುವುದೂ ತಪ್ಪುತ್ತದೆ.
ಹೊಟ್ಟೆ ಹಸಿವು ಹೆಚ್ಚುತ್ತದೆ. ಆರೋಗ್ಯಕರ ಆಹಾರ ಸೇವನೆಗೆ ಅನುವು ಮಾಡಿ ಕೊಡುತ್ತದೆ. ಅಸ್ತಮಾ ಇತ್ಯಾದಿ ಸಮಸ್ಯೆ ಇರುವವರು ಐಸ್ ಕ್ಯೂಬ್ ಬಳಸಬೇಕಿಲ್ಲ. ಇದರ ರಸವನ್ನು ಕುಡಿದರೆ ಸಾಕು. ಮಧುಮೇಹಿಗಳಿಗೂ ಇದರ ಸೇವನೆಯಿಂದ ಸಮಸ್ಯೆಗಳಾಗದು ಎಂಬುದನ್ನು ಅಧ್ಯಯನ ದೃಢಪಡಿಸಿದೆ.