
ಮದುವೆ ಸಂಬಂಧ ಬೆಸೆಯುವ ಕ್ಷಣ. ಮದುವೆ ಸದಾ ನೆನಪಿನಲ್ಲಿರಬೇಕೆಂದು ಎಲ್ಲರೂ ಬಯಸ್ತಾರೆ. ಮದುವೆಗೆ ಮೊದಲು ಸಾಕಷ್ಟು ಕೆಲಸದಲ್ಲಿ ಬ್ಯುಸಿಯಾಗಿರುವ ವಧು-ವರರಿಗೆ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯವಿರುವುದಿಲ್ಲ.
ಆದ್ರೆ ಮೇಕಪ್ ನಂತೆ ಆರೋಗ್ಯಕರ ಮಹತ್ವ ನೀಡುವ ಅವಶ್ಯಕತೆಯಿದೆ. ಮೊದಲಿನಿಂದಲೇ ಕೆಲ ಜ್ಯೂಸ್ ಸೇವಿಸುತ್ತ ಬಂದರೆ ಮದುವೆ ದಿನ ಯಾವುದೇ ಆರೋಗ್ಯ ಸಮಸ್ಯೆ ಕಾಡುವುದಿಲ್ಲ.
ಬಾದಾಮಿ ಶೇಕ್ : ಮದುವೆಗೆ ಕೆಲವು ತಿಂಗಳ ಮೊದಲು ಇದರ ಸೇವನೆ ಶುರು ಮಾಡಿದ್ರೆ ಸಾಕು. ಇದು ಚರ್ಮವನ್ನು ರಕ್ಷಿಸುತ್ತದೆ. ಮುಖ ಹೊಳೆಯುವಂತೆ ಮಾಡುತ್ತದೆ. ಬಾದಾಮಿಯಲ್ಲಿರುವ ವಿಟಮಿನ್ ಇ, ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಇತರ ಪೋಷಕಾಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಎಳನೀರು : ಎಳ ನೀರು ಕುಡಿಯಲು ರುಚಿಕರವಾಗಿರುತ್ತದೆ. ಇದರಲ್ಲಿ ಸಾಕಷ್ಟು ಔಷಧಿ ಗುಣಗಳಿವೆ. ಇದು ಸಂಪೂರ್ಣವಾಗಿ ನೈಸರ್ಗಿಕ ಪಾನೀಯವಾಗಿದೆ. ಇದು ದೇಹವನ್ನು ಬಲಪಡಿಸುತ್ತದೆ. ಇದು ಒತ್ತಡ, ಆಯಾಸ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
ಗ್ರೀನ್ ಟೀ : ಗ್ರೀನ್ ಟೀ ಆರೋಗ್ಯಕ್ಕೆ ಅತ್ಯುತ್ತಮ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆಯಾಸ, ದೌರ್ಬಲ್ಯ ದೂರವಾಗುತ್ತದೆ. ತೂಕ ನಿಯಂತ್ರಣದ ಜೊತೆಗೆ, ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ.