alex Certify ಪ್ರತಿದಿನ ಕುಡಿಯಿರಿ ಈ ಎಲೆಗಳ ಜ್ಯೂಸ್‌; ನಿಮಗೆ ವಯಸ್ಸೇ ಆಗುವುದಿಲ್ಲ..…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಕುಡಿಯಿರಿ ಈ ಎಲೆಗಳ ಜ್ಯೂಸ್‌; ನಿಮಗೆ ವಯಸ್ಸೇ ಆಗುವುದಿಲ್ಲ..…!

ಯಾವಾಗಲೂ ಯಂಗ್‌ ಆಗಿ ಕಾಣಬೇಕು, ಫಿಟ್‌ ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ನಿಮ್ಮ ಈ ಕನಸು ನನಸಾಗಬೇಕೆಂದರೆ ಪ್ರತಿದಿನ ನುಗ್ಗೇ ಎಲೆಯನ್ನು ಬಳಸಬೇಕು. ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಪ್ರತಿದಿನ ನುಗ್ಗೇ ಎಲೆಯ ಜ್ಯೂಸ್ ಕುಡಿದರೆ ಯಾವಾಗಲೂ ಫಿಟ್ ಆಗಿರಬಹುದು.

ನುಗ್ಗೇ ಎಲೆಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಜ್ಯೂಸ್ ಮಾಡಿ ಪ್ರತಿದಿನ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ. ಫಿಟ್ನೆಸ್‌ ಜೊತೆಗೆ ಯಂಗ್‌ ಆಗಿಯೂ ಕಾಣಬಹುದು.

ಸಕ್ಕರೆ ಕಾಯಿಲೆ ಇರುವವರು ನುಗ್ಗೇಕಾಯಿ ಜ್ಯೂಸ್‌ ಅನ್ನು ಪ್ರತಿದಿನ ಸೇವಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದೇಹವನ್ನು ಬಲಪಡಿಸಲು ಸಹ ನುಗ್ಗೇ ಎಲೆ ಸಹಕಾರಿಯಾಗಿದೆ. ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ನುಗ್ಗೇ ಎಲೆಯಲ್ಲಿರುತ್ತದೆ. ಹಾಗಾಗಿ  ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮೂಳೆಗಳನ್ನು ಬಲಪಡಿಸಲು ಕೂಡ ಇದು ಪ್ರಯೋಜನಕಾರಿ.

ದೇಹದಲ್ಲಿ ಸಂಗ್ರಹವಾದ ಕೊಳಕು ರಕ್ತವನ್ನು ಸ್ವಚ್ಛಗೊಳಿಸಲು ನುಗ್ಗೇಕಾಯಿಯನ್ನು ಬಳಸಬಹುದು. ರಕ್ತವನ್ನು ನಿರ್ವಿಷಗೊಳಿಸಲು ಇದು ತುಂಬಾ ಸಹಾಯಕವಾಗಿದೆ. ಹೊಟ್ಟೆಯ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯ ನುಗ್ಗೇ ಎಲೆಗಳಲ್ಲಿದೆ. ಪ್ರತಿದಿನ ನುಗ್ಗೇ ಎಲೆಗಳ ರಸವನ್ನು ಕುಡಿಯುವುದರಿಂದ ಹುಣ್ಣುಗಳ ಅಪಾಯ ಕೂಡ  ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...