ಕಬ್ಬಿನ ಜ್ಯೂಸ್ ಬೇಸಿಗೆಯಲ್ಲಿ ದೇಶದಾದ್ಯಂತ ಸಿಗುವ ಪಾನೀಯ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಬ್ಬಿನ ಜ್ಯೂಸ್ ಅಂದ್ರೆ ಇಷ್ಟಪಡ್ತಾರೆ. ವಿಭಿನ್ನ ರುಚಿ ಮತ್ತು ಪೌಷ್ಠಿಕಾಂಶದ ಗುಣಗಳು ಇದ್ರಲ್ಲಿರುತ್ತವೆ.
ಒಂದು ಗ್ಲಾಸ್ ತಂಪಾದ ಕಬ್ಬಿನ ಜ್ಯೂಸ್ ಬರಿ ಬಾಯಾರಿಕೆ ನೀಗಿಸುವುದಿಲ್ಲ, ಜೊತೆಗೆ ಇಡೀ ದೇಹಕ್ಕೆ ಶಕ್ತಿ ತುಂಬುತ್ತದೆ. ಬೇಸಿಗೆಯ ಸಮಯದಲ್ಲಿ ಅತಿಯಾಗಿ ಬೆವರುವುದರಿಂದ ದೇಹದಲ್ಲಿನ ಎಲೆಕ್ಟ್ರೋಲೈಟ್ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹವು ನಿರ್ಜಲೀಕರಣದಿಂದ ಬಳಲುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಮಧ್ಯಾಹ್ನ ಒಂದು ಲೋಟ ಕಬ್ಬಿನ ಜ್ಯೂಸ್ ಕುಡಿದರೆ ದೇಹಕ್ಕೆ ಶಕ್ತಿ ಬರುತ್ತದೆ.
ಕಬ್ಬಿನ ಜ್ಯೂಸ್ ನಿಂದ ನಿಮ್ಮ ತೂಕವನ್ನ ಇಳಿಸಿಕೊಳ್ಳಬಹುದು ಅಂತಾ ಹೇಳ್ತಾರೆ ಕೆಲವರು. ಅಯ್ಯೋ ಸಕ್ಕರೆ ತಿಂದ್ರೆ ಕೊಬ್ಬು ಜಾಸ್ತಿ ಆಗುತ್ತೆ ಅಂತಾರೆ ಹಲವರು. ಆದ್ರೆ ಕಬ್ಬಿನ ಜ್ಯೂಸ್ ಕುಡಿದರೆ ಕೊಬ್ಬು ಹೇಗೆ ಕಡಿಮೆಯಾಗುತ್ತೆ ಅಂತಿರಾ? ಹೌದು, ಕಬ್ಬಿನ ಜ್ಯೂಸ್ ನಿಜಕ್ಕೂ ತೂಕ ಇಳಿಸಲು ಸಹಾಯಕಾರಿಯಾಗಲಿದೆ.
ನೈಸರ್ಗಿಕವಾಗಿಯೇ ಸಿಹಿಯಾಗಿರುವ ಕಬ್ಬಿಗೆ ಯಾವುದೇ ಸಿಹಿ ಸೇರಿಸುವ ಅಗತ್ಯವಿಲ್ಲ. ಹೀಗಾಗಿ ಪ್ರತಿನಿತ್ಯ ಸೇವಿಸಿದ್ರೆ ದೇಹದ ಕೊಬ್ಬು ಕರಗಲಿದೆ.
ಕಬ್ಬಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ತೂಕ ಕಡಿಮೆ ಮಾಡಲು ಇಚ್ಚಿಸುವವರಿಗೆ ಇದು ಪರಿಪೂರ್ಣ ಪಾನೀಯವಾಗಿದೆ.
ದೇಹವು ನಿರ್ಜಲೀಕರಣವಾಗಿ ದಣಿದಿದ್ದರೆ ಒಂದು ಕಪ್ ಕಬ್ಬಿನ ಜ್ಯೂಸ್ ಕುಡಿದರೆ ಸಾಕು, ಇಡೀ ದಿನ ದೈನಂದಿನ ಚಟುವಟಿಕೆಗಳನ್ನು ಖುಷಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
ದೇಹದಲ್ಲಿರುವ ಬೇಡವಾದ ಕೊಬ್ಬನ್ನು ಕಬ್ಬಿನ ಜ್ಯೂಸ್ ಕರಗಿಸುತ್ತದೆ. ಹೀಗಾಗಿ ವೇಗವಾಗಿ ದೇಹದ ತೂಕ ಕಳೆದುಕೊಳ್ಳಬಹುದು.
ಜೀರ್ಣಕ್ರಿಯೆ, ಮಲಬದ್ದತೆಯನ್ನು ನಿವಾರಿಸಲು ಕಬ್ಬಿನ ಜ್ಯೂಸ್ ಅತ್ಯಂತ ಉಪಕಾರಿ
ಹೀಗೆ ಯಾವುದೇ ಪ್ರಿಸರ್ವೇಟಿವ್ ಹಾಕದೆ, ನೈಸರ್ಗಿಕವಾಗಿ ಸಿಗುವ ಕಬ್ಬಿನ ಜ್ಯೂಸ್ ನಿಂದ ಆರೋಗ್ಯ ವೃದ್ಧಿಸಿಕೊಳ್ಳುವ ಜೊತೆಗೆ ಬೇಡವಾದ ಕೊಬ್ಬನ್ನು ಕರಗಿಸಬಹುದು.