ಬೆಳಿಗ್ಗೆ ಎದ್ದಾಕ್ಷಣ ಹಾಲು ಕುದಿಸಿ ಚಹಾ ಪುಡಿ ಸಕ್ಕರೆ ಸೇರಿಸಿ, ಸೋಸಿ ಸೊಗಸಾದ ಚಹಾ ಮಾಡಿ ಕುಡಿಯುವುದೆಂದರೆ ನಿಮಗೆ ಬಲು ಇಷ್ಟವೇ..? ಹಾಗಿದ್ದರೆ ಇಲ್ಲಿ ಕೇಳಿ ಚಹಾ ಕುಡಿಯುವುದು ಹೇಗಿರಬೇಕೆಂದು ಹೇಳುತ್ತೇವೆ.
ಆರೋಗ್ಯದ ಹಲವು ಪ್ರಯೋಜನಗಳನ್ನು ಹೊಂದಿರುವ ಚಹಾ ನಿತ್ಯ ಕುಡಿಯುವುದು ಒಳ್ಳೆಯದೇ. ಆದರೆ ಅದಕ್ಕೆ ಸಕ್ಕರೆ ಬೆರೆಸುವುದು ಮಾತ್ರ ಒಳ್ಳೆಯದಲ್ಲ. ಚಹಾದಲ್ಲಿ ಹಲವು ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳಿವೆ. ಆದರೆ ಹಾಲು ಮತ್ತು ಸಕ್ಕರೆ ಬೆರೆಸಿದರೆ ಚಹಾದ ಪ್ರಯೋಜನಗಳು ದೂರವಾಗುತ್ತವೆ.
ಸಕ್ಕರೆಯಿಂದ ಕ್ಯಾಲೋರಿ ಹೆಚ್ಚಾದರೆ ಹಾಲು ಸೇರಿಸಿದರೆ ಚಹಾದ ಅಸಲಿ ಲಾಭಗಳು ಕಡಿಮೆಯಾಗುತ್ತವೆ. ಇದರ ಪ್ರಯೋಜನ ಎಲ್ಲವೂ ದೊರೆಯಬೇಕಿದ್ದರೆ ಸಕ್ಕರೆ ಬಳಕೆ ಕಡಿಮೆ ಮಾಡಿ. ಒಮ್ಮೆಲೇ ನಿಲ್ಲಿಸುವುದು ಕಷ್ಟವಾದರೆ ಸಕ್ಕರೆ ಹಾಕುವ ಪ್ರಮಾಣ ಕಡಿಮೆ ಮಾಡುತ್ತಾ ಬನ್ನಿ.
ಚಹಾಗೆ ಸಕ್ಕರೆ ಹಾಕಿ ಕುಡಿದರೆ ಶಕ್ತಿ ಸಿಗುತ್ತದೆ ಎಂಬುದು ಸುಳ್ಳು ವಾದ. ಇದು ಒತ್ತಡ ಕಡಿಮೆ ಮಾಡುತ್ತದೆ, ಸಕ್ಕರೆ ದೂರವಿಟ್ಟರೆ ನಿದ್ರೆಯೂ ಬರುತ್ತದೆ. ಸಾಧ್ಯವಾದಷ್ಟು ನೈಸರ್ಗಿಕ ಚಹಾವನ್ನೇ ಕುಡಿಯಿರಿ. ಟೀ ಪಾಟ್ ಮತ್ತು ಕಪ್ ಮಾತ್ರ ಬಳಸಿ ಚಹಾದ ಎಲೆಗಳಿಂದ ಚಹಾ ತಯಾರಿಸಿ.
ಸದ್ಯ ಸಿಗುವ ಟೀ ಬ್ಯಾಗ್ ಗಳಿಂದಲೇ ಚಹಾ ತಯಾರಿಸಿ. ಸಕ್ಕರೆ ಹಾಕದ ಚಹಾ ಕುಡಿದು ಹೊಂದಿಕೊಂಡರೆ ಅದೇ ರುಚಿ ಎನಿಸುತ್ತದೆ. ಅದನ್ನೇ ಅಭ್ಯಾಸ ಮಾಡಿ.