
ತೃಣಮೂಲ ಕಾಂಗ್ರೆಸ್‌ನ ಫೈರ್‌ಬ್ರಾಂಡ್ ಸಂಸದೆ ಎಂದೇ ಪ್ರಸಿದ್ಧರಾಗಿರೊ ಮಹುವಾ ಮೊಯಿತ್ರಾ ಅವರು, ಲೋಕಸಭೆಯಲ್ಲಿ ತಮ್ಮ ಭಾಷಣಕ್ಕೂ ಮುನ್ನ ಟ್ವೀಟ್ ದಾಳಿ ನಡೆಸಿದ್ದಾರೆ. ಲೋಕಸಭೆಯಲ್ಲಿ ನಾನು ಮಾಡುವ ಭಾಷಣಕ್ಕೆ ಸಿದ್ಧರಾಗಿ ಎಂದು ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ಇಂದು ಸಂಜೆ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಕುರಿತು ಮಾತನಾಡುತ್ತಿದ್ದೇನೆ. ನನ್ನ ಭಾಷಣಕ್ಕೆ ಉತ್ತರ ಕೊಡಲು, ನಿಮ್ಮ ತಂಡವನ್ನ ಸಿದ್ಧಗೊಳಿಸಿ ಮತ್ತು ಕಾಲ್ಪನಿಕ ಕ್ರಮಗಳ ಬಗ್ಗೆ ಓದಿಕೊಳ್ಳಿ ಎಂದು ಬಿಜೆಪಿ ವಿರುದ್ಧ ಟ್ವೀಟ್ ಮಾಡಿರುವ ಮಹುವಾ, ಬೇಕಿದ್ದರೆ ಗೋಮೂತ್ರ ಶಾಟ್ಸ್ ಸಹ ಕುಡಿಯಿರಿ ಎಂದಿದ್ದಾರೆ.
BIG NEWS: ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಸಚಿವ ಆನಂದ್ ಸಿಂಗ್ ದಿಢೀರ್ ಭೇಟಿ
ತಮ್ಮ ಆವೇಶಭರಿತ ಭಾಷಣಗಳಿಂದಲೇ ಹೆಸವಾಸಿಯಾಗಿರೊ ಮಹುವಾ, ಈ ಹಿಂದೆಯೂ ಹಲವು ಟ್ವೀಟ್ ಗಳ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಪ್ರಸ್ತುತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾಷಣ ಎಲ್ಲೆಡೆ ಚರ್ಚೆಯಾಗ್ತಿದೆ, ಈ ಸಂದರ್ಭದಲ್ಲಿ ಮಹುವಾ ಮೊಯಿತ್ರಾ ಯಾವ ವಿಚಾರವನ್ನ ಚರ್ಚಿಸಬಹುದು ಎಂಬ ಚರ್ಚೆಯು ಜೋರಾಗಿದೆ.