ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ಬೆಳಿಗ್ಗೆ ಎದ್ದ ತಕ್ಷಣ ನೀರಿಗೆ ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯುತ್ತಾರೆ. ಬಿಸಿ ನೀರಿಗೆ ನಿಂಬೆ ಹನಿ ಬೆರೆಸಿ ಕುಡಿಯುವುದಕ್ಕಿಂತ ನಾವು ಹೇಳುವ ವಿಧಾನದಲ್ಲಿ ಕುಡಿದ್ರೆ ಸಾಕಷ್ಟು ಲಾಭಗಳಿವೆ.
ನಿಂಬೆ ಹಣ್ಣನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಅದನ್ನು ಕಟ್ ಮಾಡಿ ಅರ್ಧ ಲೀಟರ್ ನೀರಿಗೆ ಹಾಕಿ 5 ನಿಮಿಷ ಕುದಿಸಿ. 10 ನಿಮಿಷ ನೀರು ತಣ್ಣಗಾಗಲು ಬಿಡಿ. ನಂತ್ರ ಈ ನೀರನ್ನು ಕುಡಿಯಿರಿ. ಪ್ರತಿದಿನ ಹೀಗೆ ಮಾಡುತ್ತ ಬನ್ನಿ. ರುಚಿಗಾಗಿ ಒಂದು ಹನಿ ಜೇನು ತುಪ್ಪವನ್ನು ನೀರಿಗೆ ಬೆರೆಸಿ ಕುಡಿಯಬಹುದು.
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಅದು ಇಮ್ಯೂನಿಟಿಯನ್ನು ಹೆಚ್ಚಿಸುತ್ತದೆ. ಇದ್ರಲ್ಲಿ ಆಂಟಿಆಕ್ಸಿಡೆಂಟ್ ಇರೋದ್ರಿಂದ ಶೀತ ಕಡಿಮೆಯಾಗುತ್ತದೆ. ಈ ನೀರು ಜೀರ್ಣಕ್ರಿಯೆ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ. ನಿಂಬೆ ನೀರು ತೂಕವನ್ನು ಕಡಿಮೆ ಮಾಡುತ್ತದೆ. ಆದ್ರೆ ಶಕ್ತಿ ಕುಗ್ಗುವುದಿಲ್ಲ. ಈ ನೀರು ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ.
ಶಕ್ತಿಯನ್ನು ಹೆಚ್ಚಿಸಲು ನಿಂಬು ಪಾನಿ ಸಹಾಯ ಮಾಡುತ್ತದೆ. ಮಲಬದ್ಧತೆ ಸಮಸ್ಯೆಗೆ ಇದು ಹೇಳಿ ಮಾಡಿಸಿದ ಪಾನೀಯ. ದಿನ ಪೂರ್ತಿಯ ಸುಸ್ತು ಕ್ಷಣ ಮಾತ್ರದಲ್ಲಿ ಮಾಯವಾಗುತ್ತದೆ. ಬೇಯಿಸಿದ ನಿಂಬೆ ಹಣ್ಣನ್ನು ಸಿಪ್ಪೆ ಸಮೇತ ತಿನ್ನುವುದು ಬಹಳ ಉತ್ತಮ.