ದಿನ ಬೆಳಗ್ಗೆ ಎದ್ದಾಕ್ಷಣ ನೀವು ಟೀ ಕುಡಿಯುವವರೇ… ಅದಿಲ್ಲದೆ ಹೋದರೆ ಏನನ್ನೋ ಕಳೆದುಕೊಂಡ ಅನುಭವ ನಿಮಗಾಗುತ್ತದೆಯೇ… ಹಾಗಿದ್ದರೆ ಇಲ್ಲಿ ಕೇಳಿ, ಆರೋಗ್ಯಕರವಾದ ಶುಂಠಿ ಚಹಾ ಮಾಡುವ ವಿಧಾನ ಇಲ್ಲಿದೆ.
ಮಳೆಗಾಲದಲ್ಲಿ ಸೋಂಕನ್ನೂ ತಡೆಗಟ್ಟಬಲ್ಲ ಈ ಚಹಾ ತಯಾರಿಸುವುದು ಬಲು ಸುಲಭ. ನಿತ್ಯ ಚಹಾ ಮಾಡುವಂತೆ ನೀರಿಟ್ಟು ಕುದಿಸಿ. ಶುಂಠಿಯನ್ನು ಜಜ್ಜಿ ಹಾಕಿ, ಆರರಿಂದ ಎಂಟು ತುಳಸಿ ಎಲೆಯನ್ನೂ ಸೇರಿಸಿ. ಐದು ನಿಮಿಷ ಕುದಿಸಿ, ಬಳಿಕ ಚಹಾ ಪುಡಿ ಸೇರಿಸಿ. ಉಳಿದಂತೆ ಹಾಲು, ಸಕ್ಕರೆ ಬೆರೆಸಿ ಸೋಸಿ ಕುಡಿಯಿರಿ.
ಕುಡಿಯಲು ಗರಂ ಎನಿಸುವ ಈ ಚಹಾದಲ್ಲಿ ಪ್ರತಿರೋಧಕ ಶಕ್ತಿ ಸಾಕಷ್ಟಿರುತ್ತದೆ. ಸಕ್ಕರೆ ಬದಲು ಜೇನುತುಪ್ಪ ಬಳಸುವುದರಿಂದ ಮತ್ತಷ್ಟು ಲಾಭಗಳನ್ನು ಪಡೆಯಬಹುದು. ಕರಿಮೆಣಸು, ಸೋಂಪು, ಜೀರಿಗೆ ಮತ್ತು ದಾಲ್ಚಿನ್ನಿ ಪುಡಿ ಬೆರೆಸಿ ಕುಡಿದರೆ ಮತ್ತಷ್ಟೂ ಪ್ರಯೋಜನಗಳನ್ನು ಪಡೆಯಬಹುದು.
ನೀವು ನಿತ್ಯ ಕುಡಿಯುವ ಚಹಾಗೆ ಇದರಲ್ಲಿ ಕೆಲವು ವಸ್ತುಗಳನ್ನು ಬಳಸಿ ಮಾಡಿ ನೋಡಿ. ರುಚಿ ಬದಲಾಗುವುದರೊಂದಿಗೆ ನಿಮ್ಮ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.