alex Certify ಪ್ರತಿದಿನ ಕುಡಿಯಿರಿ ಶುಂಠಿ ಕಷಾಯ, ದಂಗಾಗಿಸುತ್ತೆ ಇದರ ಆರೋಗ್ಯಕಾರಿ ಅಂಶಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಕುಡಿಯಿರಿ ಶುಂಠಿ ಕಷಾಯ, ದಂಗಾಗಿಸುತ್ತೆ ಇದರ ಆರೋಗ್ಯಕಾರಿ ಅಂಶಗಳು…!

ಫಿಟ್ ಆಗಿರಬೇಕು ಅಂದ್ರೆ ಆಹಾರ ಪದ್ಧತಿಯನ್ನು ಸುಧಾರಿಸುವುದು ಬಹಳ ಮುಖ್ಯ.‌ ಜೀವನಶೈಲಿ ಸರಿಯಾಗಿಲ್ಲದಿದ್ದರೆ ದೇಹವು ದುರ್ಬಲವಾಗುತ್ತದೆ. ಅನೇಕ ಕಾಯಿಲೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ನಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಶುಂಠಿ ಕಷಾಯವನ್ನು ಸೇರಿಸಿಕೊಂಡರೆ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಗಳಾಗುತ್ತವೆ. ಮೈಕೈ ನೋವು ನಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.

ಸ್ಥೂಲಕಾಯದಿಂದ ತೊಂದರೆಗೊಳಗಾಗಿದ್ದರೆ, ತೂಕ ಕಡಿಮೆ ಮಾಡುವ ಪ್ರಯತ್ನದಲ್ಲಿದ್ದರೆ ಪ್ರತಿದಿನ ಶುಂಠಿ ಕಷಾಯ ಕುಡಿಯಿರಿ. ಸಣ್ಣ ತುಂಡು ಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಕುದಿಸಿಕೊಂಡು ಅದನ್ನು ಬಿಸಿಬಿಸಿಯಾಗಿ ಕುಡಿಯುವುದರಿಂದ ಬೊಜ್ಜು ಕಡಿಮೆಯಾಗುತ್ತದೆ.

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ಕಷಾಯ ಕುಡಿಯುವುದು ಮಧುಮೇಹ ರೋಗಿಗಳಿಗೆ ಪರಿಣಾಮಕಾರಿ. ಇದು ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

ಮುಖದಲ್ಲಿ ಮೊಡವೆಗಳು ಮತ್ತು ಕಲೆಗಳಿದ್ದರೆ ಅದಕ್ಕೂ ಶುಂಠಿಯಿಂದ ಪರಿಹಾರವಿದೆ. ಶುಂಠಿ ಕಷಾಯ ನಮ್ಮ ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತದೆ. ದೇಹದ ಕೊಳೆಯಲ್ಲ ಹೋದರೆ ಮುಖದ ಮೇಲಿನ ಮೊಡವೆಗಳು ಕೂಡ ನಿವಾರಣೆಯಾಗುತ್ತವೆ.

ರಕ್ತ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸಲು ಶುಂಠಿ ಕಷಾಯ ಸಹಕಾರಿಯಾಗಿದೆ. ದೇಹದಲ್ಲಿನ ಊತವನ್ನು ಸಹ ಇದು ಕಡಿಮೆ ಮಾಡಬಲ್ಲದು.

ಶುಂಠಿ ಕಷಾಯವನ್ನ ನಿಯಮಿತವಾಗಿ ಕುಡಿಯುವುದರಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ನಿವಾರಣೆಯಾಗುತ್ತವೆ. ಅಜೀರ್ಣ ಮತ್ತು ಗ್ಯಾಸ್ಟ್ರಿಕ್‌ ತೊಂದರೆಯನ್ನು ಕೂಡ ಇದು ನಿವಾರಿಸಬಲ್ಲದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...