alex Certify ಔಷಧಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಈ ಕಷಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಔಷಧಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಈ ಕಷಾಯ

ತುಳಸಿ ಗಿಡಕ್ಕೆ ಪೂಜೆ-ಪುನಸ್ಕಾರಗಳಲ್ಲಿ ಬಹಳ ಮಹತ್ವವಿದೆ. ತುಳಸಿಯನ್ನು ವಿಷ್ಣುಪ್ರಿಯ ಎಂದೂ ಕರೆಯುತ್ತಾರೆ. ಶತಮಾನಗಳಿಂದಲೂ ತುಳಸಿ ತನ್ನ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ತುಳಸಿ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುವ ಲ್ಯಾಮಿಯೇಸಿ ಕುಟುಂಬಕ್ಕೆ ಸೇರಿದೆ. ಉಸಿರಾಟದ ತೊಂದರೆಗಳಿಂದ ಹಿಡಿದು ಸೋಂಕು ನಿವಾರಣೆಯವರೆಗೆ ಅನೇಕ ಅಸ್ವಸ್ಥತೆಗಳನ್ನು ತುಳಸಿ ನಿವಾರಿಸಬಲ್ಲದು. ತುಳಸಿಯ ಎಲೆಗಳು ಮಾತ್ರವಲ್ಲ, ಈ ಸಸ್ಯದ ಪ್ರತಿಯೊಂದು ಭಾಗ ಅಂದರೆ ಕಾಂಡ, ಬೀಜಗಳು, ಬೇರು, ಹೂವು ಎಲ್ಲವೂ ಔಷಧೀಯ ಗುಣಗಳಿಂದ ತುಂಬಿವೆ.

ಕೆಮ್ಮು, ಗಂಟಲು ನೋವಿಗೆ ತುಳಸಿ ಕಷಾಯ ರಾಮಬಾಣವಿದ್ದಂತೆ. ಕೆಮ್ಮು ಇದ್ದರೆ ನಾಲ್ಕಾರು ತುಳಸಿ ಎಲೆಗಳನ್ನು ಜಗಿದು ತಿನ್ನಬೇಕು, ಅಥವಾ ಇದನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಕುಡಿಯಬಹುದು. ಗಂಟಲು ನೋವಿದ್ದರೆ ತುಳಸಿ ಬೀಜಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಪರಿಹಾರ ಸಿಗುತ್ತದೆ. ತುಳಸಿ ಬೀಜಗಳನ್ನು ಸಲಾಡ್, ಪಾಸ್ತಾಗಳಲ್ಲಿ ಕೂಡ ಬಳಸಬಹುದು.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಬೆರೆಸಿದ ನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ರಾತ್ರಿ ಬಿಸಿಬಿಸಿ ನೀರಿಗೆ ನಾಲ್ಕಾರು ತುಳಸಿ ಎಲೆಗಳನ್ನು ಹಾಕಿಡಿ, ಬೆಳಗ್ಗೆ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಮಳೆಗಾಲದಲ್ಲಿ ಕಾಡುವ ರೋಗಗಳಿಂದ ಪರಿಹಾರ : ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಜ್ವರದಂತಹ ರೋಗಗಳ ಅಪಾಯ ಹೆಚ್ಚು. ತುಳಸಿ ಎಲೆಗಳ ಕಷಾಯ ಕುಡಿದರೆ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ. ತುಳಸಿ ಎಲೆಗಳನ್ನು ಜಜ್ಜಿ ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ಉಸಿರಾಟದ ಸಮಸ್ಯೆ ಆಗುವುದಿಲ್ಲ. ಗಂಟಲು ನೋವಿದ್ದರೆ ತುಳಸಿ ಕಷಾಯದಲ್ಲಿ ಗಾರ್ಗ್ಲಿಂಗ್‌ ಕೂಡ ಮಾಡಬಹುದು.

ಮೂತ್ರಪಿಂಡದ ಆರೋಗ್ಯ ಸುಧಾರಣೆ: ತುಳಸಿ ಮೂತ್ರಪಿಂಡದ ಕಲ್ಲುಗಳನ್ನು ಗುಣಪಡಿಸಬಲ್ಲದು. ತುಳಸಿ ಎಲೆಗಳ ರಸವನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಕಿಡ್ನಿ ಕಲ್ಲು ನಿವಾರಣೆಯಾಗುತ್ತದೆ. ಆದರೆ ವೈದ್ಯರ ಸಲಹೆ ಪಡೆದೇ ಇದನ್ನು ಸೇವಿಸಿ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ: ಖಾಲಿ ಹೊಟ್ಟೆಯಲ್ಲಿ ತುಳಸಿ ರಸ ಅಥವಾ ಕಷಾಯ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಉಪವಾಸದ ಸಮಯದಲ್ಲಿ ತುಳಸಿ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಚರ್ಮದ ಸೋಂಕಿನಿಂದ ಪರಿಹಾರ : ತುಳಸಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಇನ್‌ಫ್ಲಮೇಟರಿ ಮತ್ತು ಆ್ಯಂಟಿವೈರಲ್ ಗುಣಗಳಿದ್ದು ಚರ್ಮದ ಸೋಂಕುಗಳನ್ನು ಇದು ಕಡಿಮೆ ಮಾಡುತ್ತದೆ ಮತ್ತು ಕ್ರಮೇಣ ಅವುಗಳನ್ನು ನಿವಾರಿಸುತ್ತದೆ. ತುಳಸಿ ರಸದ ಬಳಕೆಯು ಶಿಲೀಂಧ್ರಗಳ ಸೋಂಕುಗಳು ಮತ್ತು ಇತರ ರೀತಿಯ ಚರ್ಮದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಲ್ಯುಕೋಡರ್ಮಾವನ್ನು ಗುಣಪಡಿಸಲು ಸಹ ಇದನ್ನು ಬಳಸಬಹುದು.

ಒತ್ತಡ ನಿವಾರಣೆ : ತುಳಸಿಯನ್ನು ಅಡಾಪ್ಟೋಜೆನಿಕ್ ಎಂದು ಪರಿಗಣಿಸಲಾಗುತ್ತದೆ. ಇದು ಮೂಡ್ ಸ್ವಿಂಗ್‌ಗಳನ್ನು ನಿಯಂತ್ರಿಸಬಲ್ಲದು. ಒತ್ತಡ ಕಡಿಮೆ ಮಾಡಿ ಮನಸ್ಸನ್ನು ಶಾಂತಗೊಳಿಸುತ್ತದೆ. ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಹೃದಯ ಆರೋಗ್ಯ : ತುಳಸಿಯಲ್ಲಿ ವಿಟಮಿನ್ ಸಿ ಮತ್ತು ಯುಜೆನಾಲ್‌ನಂತಹ ಉತ್ಕರ್ಷಣ ನಿರೋಧಕಗಳಿವೆ. ಇದು ಸ್ವತಂತ್ರ ರಾಡಿಕಲ್‌ಗಳ ಹಾನಿಕಾರಕ ಪರಿಣಾಮಗಳಿಂದ ಹೃದಯವನ್ನು ರಕ್ಷಿಸುತ್ತದೆ. ಇದರ ಉತ್ಕರ್ಷಣ ನಿರೋಧಕ ಅಂಶಗಳು ಶುಂಠಿ, ಬೆಳ್ಳುಳ್ಳಿ, ಕೆಂಪು ದ್ರಾಕ್ಷಿ ಮತ್ತು ಪ್ಲಮ್‌ಗೆ ಸಮಾನವಾಗಿವೆ.

ರಕ್ತದೊತ್ತಡ ನಿಯಂತ್ರಣ: ತುಳಸಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಇದು ಪೊಟ್ಯಾಸಿಯಮ್, ವಿಟಮಿನ್ ಎ ಮತ್ತು ಸಿಯಲ್ಲಿ ಸಮೃದ್ಧವಾಗಿದೆ. ನಾಲ್ಕರಿಂದ ಆರು ವಾರಗಳವರೆಗೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿಯನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...