ಚಿಕ್ಕಮಗಳೂರು: ಆಗಸ್ಟ್ 15 ರಿಂದ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನೂತನ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ.
ಭಕ್ತಾದಿಗಳು ಪಂಚೆ, ಶಲ್ಯ, ಧೋತಿ, ಸೀರೆ ತೊಟ್ಟು ದೇವಾಲಯಕ್ಕೆ ಆಗಮಿಸಿ ಶಾರದಾಂಬೆಯ ದರ್ಶನ ಪಡೆದುಕೊಂಡಿದ್ದಾರೆ. ಈ ಹಿಂದೆ ಶಾರದಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ಇಂತಹುದೇ ವಸ್ತ್ರ ಧರಿಸಬೇಕೆಂಬ ಯಾವುದೇ ನಿಯಮಗಳು ಇರಲಿಲ್ಲ. ಭಕ್ತಾದಿಗಳು ತಾವು ಊರಿನಿಂದ ಧರಿಸಿ ಬಂದ ವಸ್ತ್ರದಲ್ಲಿಯೇ ದರ್ಶನ ಪಡೆಯುತ್ತಿದ್ದರು.
ಗುರುವಾರದಿಂದ ಶಾರದಾ ಪೀಠದಲ್ಲಿ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ವಸ್ತ್ರ ಸಂಹಿತೆ ಪಾಲಿಸದ ಭಕ್ತರನ್ನು ದೇವಾಲಯದ ಬಾಗಿಲಲ್ಲಿಯೇ ತಡೆದು ವಾಪಸ್ ಕಳುಹಿಸಲಾಗಿದೆ. ಶೃಂಗೇರಿ ಶ್ರೀಗಳ ದರ್ಶನಕ್ಕೆ ಪುರುಷರು ಶರ್ಟ್ ಬಿಚ್ಚಿ ಮೈಮೇಲೆ ಶಲ್ಯ ಹಾಕಿಕೊಂಡು ಹೋಗಬಹುದಾಗಿದೆ. ಅದು ಈಗಲೂ ಹಿಂದೆ ಇದ್ದಂತೆಯೇ ಮುಂದುವರೆದಿದೆ. ಶಾರದಾಂಬೆ ದರ್ಶನಕ್ಕೆ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ.