ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಅನೇಕ ಬಾರಿ ಕನಸಿನಲ್ಲಿ ಕಂಡ ಘಟನೆಗಳು ವಾಸ್ತವದಲ್ಲಿಯೂ ಸಂಭವಿಸುತ್ತವೆ. ನಿದ್ದೆಯಲ್ಲಿ ಬೀಳುವ ಕನಸುಗಳು ಭವಿಷ್ಯದ ಸಂಕೇತವೆಂದೇ ಬಿಂಬಿಸಲಾಗುತ್ತದೆ. ಈ ಕನಸುಗಳು ಮುಂಬರುವ ಬಿಕ್ಕಟ್ಟು ಅಥವಾ ಕಹಿ ಸುದ್ದಿಗಳ ಬಗ್ಗೆ ನಮ್ಮನ್ನು ಎಚ್ಚರಿಸುತ್ತವೆ. ಒಳ್ಳೆಯ ಮತ್ತು ಕೆಟ್ಟ ಎರಡೂ ರೀತಿಯ ಕನಸುಗಳಿರುತ್ತವೆ. ಎಲ್ಲಾದರೂ ಹಾರಿದಂತೆ, ಬಿದ್ದಂತೆ ಅಥವಾ ಹಲ್ಲು ಮುರಿದು ಹೋದಂತೆ ಕನಸು ಬಿದ್ದರೆ ಅದು ಯಾವುದರ ಸಂಕೇತ ಎಂಬುದನ್ನು ನೋಡೋಣ.
ಕನಸಿನ ವಿಜ್ಞಾನದ ಪ್ರಕಾರ ಒಬ್ಬ ವ್ಯಕ್ತಿಯು ಎತ್ತರದಿಂದ ಬಿದ್ದಂತೆ ಕನಸು ಕಂಡರೆ ಅದು ಅಶುಭ. ಇದು ಭವಿಷ್ಯದಲ್ಲಿ ಸಂಭವಿಸಬಹುದಾದ ಕೆಲವು ದೊಡ್ಡ ತೊಂದರೆಗಳ ಸಂಕೇತವಾಗಿದೆ. ಹಾಗಾಗಿ ಈ ಬಗ್ಗೆ ಜಾಗರೂಕರಾಗಿರಬೇಕು.
ಕನಸಿನಲ್ಲಿ ಹಲ್ಲು ಮುರಿದಂತೆ ಕಂಡರೆ ನಿಮ್ಮ ಸ್ಥಾನ ಮತ್ತು ಗೌರವವನ್ನು ಕಳೆದುಕೊಳ್ಳುತ್ತೀರಿ ಎಂದರ್ಥ. ಅಂತಹ ಕನಸನ್ನು ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ಇದರರ್ಥ ನೀವು ಯಾವುದೋ ವಿಷಯದ ಬಗ್ಗೆ ಚಿಂತೆ ಅಥವಾ ಒತ್ತಡದಲ್ಲಿದ್ದೀರಿ. ಅಲ್ಲದೆ ಇದು ಆತ್ಮವಿಶ್ವಾಸದ ಕೊರತೆಯ ಸಂಕೇತವಾಗಿದೆ.
ಕನಸಿನಲ್ಲಿ ಯಾರಾದರೂ ನಿಮ್ಮನ್ನು ಹಿಂಬಾಲಿಸಿದಂತೆ, ನೀವು ತಪ್ಪಿಸಿಕೊಂಡು ಓಡಿದಂತೆ ಕಂಡರೆ ಯಾವುದೋ ವಿಷಯದ ಬಗ್ಗೆ ಚಿಂತೆ ಮಾಡುತ್ತಿದ್ದೀರಿ ಎಂದರ್ಥ. ಭವಿಷ್ಯದಲ್ಲಿ ಯಾರೊಂದಿಗಾದರೂ ಭಿನ್ನಾಭಿಪ್ರಾಯ ಬರಬಹುದು ಎಂಬುದನ್ನು ಇದು ಸೂಚಿಸುತ್ತದೆ.
ಕನಸಿನಲ್ಲಿ ಹಾರಿದಂತೆ ಕಂಡರೆ ಅದು ಮಂಗಳಕರವಾಗಿರುತ್ತದೆ. ನೀವು ಜೀವನದಲ್ಲಿ ಪ್ರಗತಿಯನ್ನು ಪಡೆಯಲಿದ್ದೀರಿ ಎಂದರ್ಥ. ವ್ಯವಹಾರದಲ್ಲಿ ಲಾಭ ಅಥವಾ ಉದ್ಯೋಗದಲ್ಲಿ ಪ್ರಗತಿಯಿರುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬುದರ ಸಂಕೇತ ಇದು.