ನೇಪಾಳದ ವಿದ್ಯಾರ್ಥಿಯೊಬ್ಬನ ಭಾಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ಧೈರ್ಯ ಮತ್ತು ನೇಪಾಳದ ಭವಿಷ್ಯದ ಬಗ್ಗೆ ಆತನಿಗಿರುವ ಕಾಳಜಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಝಾಪಾದ ಇಂಪೀರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಹೋಲಿ ಇಂಗ್ಲಿಷ್ ಸೆಕೆಂಡರಿ ಸ್ಕೂಲ್‌ನ ಹೆಡ್ ಬಾಯ್ ಓರಾ, ಶಾಲೆಯ 24 ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಈ ಭಾಷಣ ಮಾಡಿದ್ದಾನೆ.
ನೇಪಾಳದ ಬಗ್ಗೆ ತನಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ ಓರಾ, ದೇಶದ ರಾಜಕೀಯ ವ್ಯವಸ್ಥೆಯ ಬಗ್ಗೆ ತೀವ್ರ ಟೀಕೆಗಳನ್ನು ಮಾಡಿದ್ದಾನೆ. ಅಲ್ಲದೆ, ಯುವಜನತೆಯು ದೇಶದ ಭವಿಷ್ಯವನ್ನು ಬದಲಾಯಿಸಬಲ್ಲರು ಎಂದು ಹೇಳಿದ್ದಾನೆ. ಈ ಭಾಷಣ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಓರಾ ಧೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನೇಪಾಳದಲ್ಲಿ ವಿದ್ಯಾರ್ಥಿ ಚಳವಳಿಗಳು ದೊಡ್ಡ ರಾಜಕೀಯ ಬದಲಾವಣೆಗಳಿಗೆ ಕಾರಣವಾಗಿದ್ದವು. ಈಗ ಓರಾ ಭಾಷಣ ಕೂಡಾ ನೇಪಾಳದ ಯುವಜನತೆಯಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ.
Speech by this Nepali student is killing internet today pic.twitter.com/huGGFqmjdy
— Ra_Bies 3.0 (@Ra_Bies) March 14, 2025