ಇದೊಂಥರಾ ಊಹಿಸಲು ಸಾಧ್ಯವಾಗದ ಕೆಲಸ. ಇದನ್ನು ಡ್ರೀಮ್ ವರ್ಕ್ ಎಂದೂ ಕರೆಯಲಾಗಿದೆ.
38 ವರ್ಷ ವಯಸ್ಸಿನ ಟೋಕಿಯೊ ನಿವಾಸಿಯು ಗ್ರಾಹಕರೊಂದಿಗೆ ಒಂದು ಗಂಟೆ ಸಮಯ ಕಳೆಯಲು 10,000 ಯೆನ್ ಶುಲ್ಕ ವಿಧಿಸುತ್ತಾನೆ.
ಮೂಲತಃ, ನಾನು ನನ್ನನ್ನು ಬಾಡಿಗೆಗೆ ನೀಡುತ್ತೇನೆ. ನನ್ನ ಗ್ರಾಹಕರು ನಾನು ಎಲ್ಲಿ ಇರಬೇಕೆಂದು ಬಯಸುತ್ತಾರೋ ಅಲ್ಲಿಯೇ ಇರುವುದು ಮತ್ತು ಏನನ್ನೂ ಮಾಡದಿರುವುದು ನನ್ನ ಕೆಲಸ ಎಂದು ಆತ ಹೇಳಿಕೊಂಡಿದ್ದಾನೆ.
ಆತನ ಹೆಸರು ಮೊರಿಮೊಟೊ, ಆತ ಕಳೆದ ನಾಲ್ಕು ವರ್ಷಗಳಲ್ಲಿ ಸರಿ ಸುಮಾರು 4,000 ಅವಧಿಗಳನ್ನು ಈ ರೀತಿ ನಿರ್ವಹಿಸಿದ್ದಾನೆ.
ತೆಳು ಮಾತು ಸಾಮಾನ್ಯ ದೇಹದಾರ್ಡ್ಯ ಹೊಂದಿರುವ ಮೊರಿಮೊಟೊ ಟ್ವೀಟರ್ನಲ್ಲಿ ಈಗ ಸುಮಾರು ಕಾಲು ಮಿಲಿಯನ್ ಫಾಲೋಯರ್ಗಳನ್ನು ಹೊಂದಿದ್ದಾನೆ. ಅವರಲ್ಲಿ ಬಹುತೇಕರು ಆತನ ಕಸ್ಟಮರ್ಗಳು.
ಏನನ್ನೂ ಮಾಡದಿದ್ದರೆ ಮೊರಿಮೊಟೊ ಏನನ್ನೂ ಮಾಡುತ್ತಾನೆ ಎಂದಲ್ಲ. ಲೈಂಗಿಕ ರೀತಿಯ ಯಾವುದೇ ಕೋರಿಕೆಯನ್ನು ಆತ ತೆಗೆದುಕೊಳ್ಳುವುದಿಲ್ಲ. ಕಳೆದ ವಾರ, ಮೊರಿಮೊಟೊ ಅವರು 27 ವರ್ಷದ ಡೇಟಾ ವಿಶ್ಲೇಷಕ ಅರುಣಾ ಚಿದಾ ಎದುರು ಕುಳಿತುಕೊಂಡು, ಚಹಾ ಮತ್ತು ಕೇಕ್ ಮುಂದಿಟ್ಟು ವಿರಳ ಸಂಭಾಷಣೆಗೆ ಆ ಭೇಟಿ ಸೀಮಿತವಾಗಿತ್ತು. ಚಿದಾ ಅವರು ಭಾರತೀಯ ಉಡುಪನ್ನು ಸಾರ್ವಜನಿಕವಾಗಿ ಧರಿಸಲು ಬಯಸಿದ್ದರು.
“ನಾನು ಗ್ರಾಹಕರಿಗೆ ಸೇವೆಯಾಗಿ ‘ಏನೂ ಮಾಡದಿರುವ’ ನನ್ನ ಸಾಮರ್ಥ್ಯವನ್ನು ಒದಗಿಸಿದರೆ ಏನಾಗುತ್ತದೆ ಎಂದು ನಾನು ಯೋಚಿಸಲು ಪ್ರಾರಂಭಿಸಿದೆ ಎಂದು ಹೇಳಿರುವ ಆತನಿಗೆ ಈ ಒಡನಾಟದ ವ್ಯವಹಾರವು ಏಕೈಕ ಆದಾಯದ ಮೂಲವಾಗಿದೆ.
ದಿನಕ್ಕೆ ಇಬ್ಬರು ಗ್ರಾಹಕರು ಈತನಿಗೆ ಇದ್ದೇ ಇರುತ್ತಾರೆ. ಕೋವಿಡ್ಗೆ ಮೊದಲು ದಿನಕ್ಕೆ ಮೂರು ಅಥವಾ ನಾಲ್ಕು ಗ್ರಾಹಕರು ಸಿಗುತ್ತಿದ್ದರು.