ನವದೆಹಲಿ: ಕೊರೋನಾ ಚಿಕಿತ್ಸೆಯಲ್ಲಿ ಗೇಮ್ ಚೇಂಜರ್ ಎಂದು ಹೇಳಲಾಗಿರುವ ಡಿಆರ್ಡಿಒ ಅಭಿವೃದ್ಧಿಪಡಿಸಿದ 2ಜಿ ಔಷಧ ಹೊಸದೇನಲ್ಲ, ಅದು ಮರು ಪಡೆಯಲಾಗಿದ ಮೆಡಿಸನ್ ಆಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಐಸಿಎಂಆರ್ ಡಿಜಿ ಡಾ. ಬಲರಾಮ್ ಭಾರ್ಗವ ಅವರ ಪ್ರಕಾರ, ಈ ಔಷಧವನ್ನು ಹಿಂದೆ ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸಲಾಗುತ್ತಿತ್ತು. ಭಾರತದ ಮೊದಲ ಕೋವಿಡ್ ವಿರೋಧಿ ಔಷಧ 2ಡಿಜಿ ಪುನರಾವರ್ತಿತ ಔಷಧವಾಗಿದೆ. ಇದು ಹೊಸ ಔಷಧವಲ್ಲ. ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತಿದ್ದ ಇದರ ಪ್ರಾಯೋಗಿಕ ಫಲಿತಾಂಶಗಳನ್ನು ಡಿಸಿಜಿಐಗೆ ನೀಡಲಾಗಿದೆ ಎಂದು ಭಾರ್ಗವ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
2-ಡಿಯೋಕ್ಸಿ-ಡಿ-ಗ್ಲೂಕೋಸ್ ಔಷಧವನ್ನು ಹೈದರಾಬಾದ್ ನ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್(ಡಿಆರ್ಎಲ್) ಜೊತೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ)ಯ ಪ್ರಯೋಗಾಲಯವಾದ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್(ಐಎನ್ಎಂಎಎಸ್) ಅಭಿವೃದ್ಧಿಪಡಿಸಿದೆ.