ಸೆಂಟರ್ ಫಾರ್ ಫೈರ್ ಎಕ್ಸ್ ಪ್ಲೋಸಿವ್, ಎನ್ವಿರಾನ್ಮೆಂಟ್ ಸೇಫ್ಟಿ(CFEES), ದೆಹಲಿಯ ತಿಮಾರ್ ಪುರದ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್(DRDO)ನ ಭಾರತೀಯ ರಕ್ಷಣಾ ಪ್ರಯೋಗಾಲಯ, ITI ಅಪ್ರೆಂಟಿಸ್‌ಶಿಪ್‌ಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಲು CFEES ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ. ಆನ್‌ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 29. ಅಭ್ಯರ್ಥಿಗಳು drdo.gov.in ನಲ್ಲಿ ಅರ್ಜಿ ಸಲ್ಲಿಸಬೇಕಿದೆ.
ಹುದ್ದೆಯ ವಿವರ:
ಅಧಿಸೂಚನೆಯ ಪ್ರಕಾರ, DRDO ನೇಮಕಾತಿ 2021 ಅನ್ನು 38 ಖಾಲಿ ಹುದ್ದೆಗಳ ಭರ್ತಿ ಮಾಡಲು ಮಾಡಲಾಗುತ್ತಿದ್ದು, ಅದರಲ್ಲಿ ಮೋಟಾರ್ ವಾಹನ(MMV), ಡ್ರಾಫ್ಟ್ಸ್ ಮ್ಯಾನ್(ಸಿವಿಲ್), ಲ್ಯಾಬೋರೇಟರಿ ಅಸಿಸ್ಟೆಂಟ್(ಕೆಮಿಕಲ್ ಪ್ಲಾಂಟ್) ನಲ್ಲಿ ಮತ್ತು ಕಂಪ್ಯೂಟರ್ ಆಪರೇಟಿಂಗ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ಹುದ್ದೆಗಳು ಇವೆ.
ಅರ್ಜಿ ಸಲ್ಲಿಕೆ ಮಾಹಿತಿ:
ಡಿಆರ್‌ಡಿಒ ನೇಮಕಾತಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://rac.gov.in/. ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ನೋಂದಾಯಿಸಿ. ಎಲ್ಲಾ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ ಲೋಡ್ ಮಾಡಿ. ಅರ್ಜಿ ನಮೂನೆಯನ್ನು ಸಲ್ಲಿಸಿ. ಪ್ರತಿಯನ್ನು ಇಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿಯ ಆರಂಭ ದಿನಾಂಕ: ಆಗಸ್ಟ್ 9, 2021
ಆನ್ಲೈನ್ ಅರ್ಜಿಯ ಕೊನೆಯ ದಿನಾಂಕ: ಆಗಸ್ಟ್ 29, 2021
ವಯೋಮಿತಿ:
ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಮೀಸಲಾತಿ ಇಲ್ಲದ ಅಭ್ಯರ್ಥಿಗಳ ಗರಿಷ್ಠ 27 ವರ್ಷ, ಒಬಿಸಿಗೆ 30 ವರ್ಷ, ಎಸ್‌ಸಿ/ಎಸ್‌ಟಿ 32 ವರ್ಷ ಮತ್ತು ಪಿಇಡಿ 37 ವರ್ಷ ನಿಗದಿಪಡಿಸಲಾಗಿದೆ.
ಅರ್ಹತಾ ಮಾನದಂಡ:
ಅಭ್ಯರ್ಥಿಗಳು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಗೆಜೆಟ್ ಅಧಿಸೂಚನೆಯ ಪ್ರಕಾರ ಎನ್‌ಸಿವಿಟಿಯಿಂದ ಗುರುತಿಸಲ್ಪಟ್ಟ ಐಟಿಐನಿಂದ ಉತ್ತೀರ್ಣರಾಗಿರಬೇಕು, ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಯು 10 ನೇ ತರಗತಿಯ ಪರೀಕ್ಷೆಯನ್ನು ವಿಜ್ಞಾನ ಮತ್ತು ಗಣಿತದೊಂದಿಗೆ ಉತ್ತೀರ್ಣರಾಗಿರಬೇಕು.
ಮಾಸಿಕ ಸ್ಟೈಫಂಡ್
ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ 7700 ರೂ. ಮತ್ತು ಇತರೆ ಟ್ರೇಡ್‌ಗಳಿಗೆ 8050 ರೂ ಸ್ಟೈಫಂಡ್ ಪಡೆಯಲಿದ್ದಾರೆ.